ಡೈಲಿ ವಾರ್ತೆ: 23/ಫೆ. /2025

ಏಲಕ್ಕಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು!

ಭಾರತದ ಶ್ರೀಮಂತ ಪರಂಪರೆಯಲ್ಲಿ ಸಾಂಬಾರು ಪದಾರ್ಥಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇಲ್ಲಿನ ವಿವಿಧ ಮಾಸಾಲೆ ಪದಾರ್ಥಗಳು ಬಾಯಿಗೆ ರುಚಿ ನೀಡುವುದರೊಂದಿಗೆ ಆರೋಗ್ಯಕ್ಕೆ ಪೂರಕವಾಗುವ ಹಲವಾರು ಅಂಶಗಳನ್ನು ಒಳಗೊಂಡಿದೆ.

ಏಲಕ್ಕಿ ತನ್ನ ಅದ್ಭುತ ಸುವಾಸನೆಯೊಂದಿಗೆ ಮಸಾಲೆ ಪದಾರ್ಥಗಳಲ್ಲಿ ಅಗ್ರ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಮಸಾಲೆಗಳ ರಾಣಿ, ಆರೋಗ್ಯ ಸಂಜೀವಿನಿ ಎಂದು ಕರೆಸಿಕೊಳ್ಳುವ ಈ ಏಲಕ್ಕಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವುದನ್ನೂ ಒಳಗೊಂಡಂತೆ ಉತ್ತಮ ಆರೋಗ್ಯಕ್ಕೂ ವರದಾನವಾಗಿದೆ.

ಈ ಏಲಕ್ಕಿ ಗಾತ್ರದಲ್ಲಿ ಚಿಕ್ಕದಾಗಿ ಕಂಡರೂ ಇದರ ಉಪಯೋಗವನ್ನು ನೀವು ಊಹಿಸಲೂ ಸಾಧ್ಯವಾಗುವುದಿಲ್ಲ. ನಮ್ಮ ಪೂರ್ವಜರು ಇದನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಉಪಯೋಗ ಮಾಡುತ್ತಿದ್ದರು. ಇದರ ಪರಿಮಳ ಭರಿತ ಸುವಾಸನೆ ಆಹಾರದ ರುಚಿಯನ್ನು ಹೆಚ್ಚಿಸುವಂತೆ ಇದರಲ್ಲಿರುವ ಔಷಧೀಯ ಗುಣಗಳು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ:
ಏಲಕ್ಕಿಯನ್ನು ಸೇವನೆ ಮಾಡುವುದರಿಂದ ಇದು ದೇಹಕ್ಕೆ ಸೇರಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿ ಇರುವ ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ. ಸೌಮ್ಯ ಮೂತ್ರವರ್ಧನೆಯನ್ನು ವೃದ್ಧಿಸುವುದು. ಜೀವಾಣುಗಳ ನಿರ್ಮೂಲನೆಯನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಇದು ಸಹಕಾರಿ. ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.

ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ:
ನೆಗಡಿ ಮತ್ತು ಕೆಮ್ಮು ಸಮಸ್ಯೆಯನ್ನು ನಿವಾರಿಸಲು. ಚರ್ಮದ ಕಾಂತಿಯನ್ನು ಹೆಚ್ಚಿಸಲು. ಅಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.

ವಾಕರಿಗೆ ನಿವಾರಣೆ:
ಏಲಕ್ಕಿ ಆ್ಯಂಟಿಮೆಟಿಕ್ ಗುಣಗಳನ್ನು ಹೊಂದಿದ್ದು, ಇದು ವಾಕರಿಕೆ ಹಾಗೂ ವಾಂತಿಯಂತಹ ಸಂವೇದನೆಯನ್ನು ಶಮನಗೊಳಿಸುತ್ತದೆ. ದೂರದ ಸ್ಥಳಗಳಿಗೆ ಪ್ರಯಾಣಿಸುವಾಗ ಟ್ರಾವೆಲ್ ಕಿಟ್‍ನಲ್ಲಿ ಏಲಕ್ಕಿಯನ್ನು ಸಹ ಇಟ್ಟುಕೊಳ್ಳಬಹುದು. ಮುಂಜಾನೆಯ ವಾಕರಿಕೆ ಸಮಸ್ಯೆ ಹೊಂದಿರುವ ಗರ್ಭಿಣಿಯರು ಏಲಕ್ಕಿಯ ಪರಿಮಳವನ್ನು ಗ್ರಹಿಸಿ, ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಹಲ್ಲಿನ ಆರೋಗ್ಯ ಹೆಚ್ಚಿಸುತ್ತದೆ:
ಏಲಕ್ಕಿ ತನ್ನಲ್ಲಿ ಪ್ರಬಲವಾದ ಆ್ಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ಸಾಮಾನ್ಯವಾಗಿ ಹಲವರನ್ನು ಕಾಡುವ ಹಲ್ಲಿನ ನೈರ್ಮಲ್ಯದ ಜೊತೆಗೆ ಕೆಟ್ಟ ಉಸಿರನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಏಲಕ್ಕಿ ಎಣ್ಣೆಯಲ್ಲಿರುವ ಫೈಟೋಕೆಮಿಕಲ್ ಮತ್ತು ಸಿನೋಲ್ ಗುಣವು ಬ್ಯಾಕ್ಟೀರಿಯವನ್ನು ನಾಶಪಡಿಸುವುದು. ಕೆಟ್ಟ ಉಸಿರು, ಹಲ್ಲಿನಲ್ಲಿ ಕುಳಿ ಬೀಳುವುದು ಹಾಗೂ ಅನುಚಿತವಾಗಿ ಹುಟ್ಟುವ ಹಲ್ಲುಗಳನ್ನು ತಡೆಯುತ್ತದೆ. ಏಲಕ್ಕಿ ಹಣ್ಣು ಮತ್ತು ಬೀಜದ ಸಾರವು ಜೀವ ವಿರೋಧಿ ಲಕ್ಷಣವನ್ನು ಹೊಂದಿದೆ. ಉರಿಯೂತ ಲಕ್ಷಣಗಳ ಮೂಲಕ ಆವರ್ತಕ ಸೋಂಕುಗಳ ವಿರುದ್ಧ ಚಿಕಿತ್ಸಕ ರೂಪದಲ್ಲಿ ಕೆಲಸ ನಿರ್ವಹಿಸುತ್ತದೆ.
ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ, ಜೀರ್ಣಶಕ್ತಿ ವೃದ್ಧಿಸಿ, ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ. ಅಲ್ಲದೆ ತಲೆಗೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಜೀರ್ಣಕ್ರಿಯೆ ಹೆಚ್ಚಳ:
ಏಲಕ್ಕಿಯನ್ನು ಬಹಳ ಹಿಂದಿನಿಂದಲೂ ಜೀರ್ಣಕ್ರಿಯೆಯ ಸಹಾಯಕ ಎಂದು ಹೇಳಲಾಗುತ್ತದೆ. ಇದು ಹೊಟ್ಟೆಯ ಅಸಮಾಧಾನವನ್ನು ಶಮನಗೊಳಿಸುವುದಲ್ಲದೆ ಹೊಟ್ಟೆ ಹುಣ್ಣುಗಳನ್ನು ಸಮರ್ಥವಾಗಿ ಗುಣಪಡಿಸುತ್ತದೆ, ಅದರ ಔಷಧೀಯ ಗುಣಗಳು ಇದನ್ನು ನೆಚ್ಚಿನ ನೈಸರ್ಗಿಕ ಪರಿಹಾರವಾಗಿ ಮಾಡುತ್ತದೆ.

ಏಲಕ್ಕಿಯ ಆರೋಗ್ಯ ಪ್ರಯೋಜನಗಳು; ಅತಿಯಾದ ಏಲಕ್ಕಿ ಸೇವನೆ ಗರ್ಭಪಾತಕ್ಕೆ ಕಾರಣವಾಗಬಹುದು!
ಶ್ವಾಸಕೋಶದ ಆರೋಗ್ಯ ಹೆಚ್ಚಳ
ಏಲಕ್ಕಿ ಸೇವನೆಯೂ ಶ್ವಾಸಕೋಶದ ಆರೋಗ್ಯ ಅತ್ಯುತ್ತಮವಾಗಿರಿಸುತ್ತದೆ. ಕಫ ಸಮಸ್ಯೆ ನಿವಾರಿಸುತ್ತದೆ. ರೋಗಕಾರಕಗಳು, ರೋಗ, ಸೂಕ್ಷ್ಮಜೀವಿಗಳ ವಿರುದ್ಧಗಳಿಂದ ರಕ್ಷಿಸುತ್ತದೆ. ಶ್ವಾಸಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಆಸ್ತಮಾದಂತಹ ಅಲರ್ಜಿಯ ಸಮಸ್ಯೆ ದೂರಾಗಿಸಲು ಸಹಾಯ ಮಾಡುತ್ತದೆ. ಇದರಲ್ಲಿರು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಉಸಿರಾಟ ಸಮಸ್ಯೆಗಳನ್ನು ದೂರಾಗಿಸುತ್ತದೆ.

ಪಿತ್ತಜನಕಾಂಗದ ರಕ್ಷಕ:
ಅಧಿಕ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಆಹಾರದ ಪರಿಸ್ಥಿತಿಗಳಲ್ಲಿಯೂ ಸಹ ಯಕೃತ್ತಿಗೆ ಏಲಕ್ಕಿಯ ರಕ್ಷಣಾತ್ಮಕ ಪ್ರಯೋಜನಗಳು. ಸಂಶೋಧನೆಯು ಈ ಹಂತದಲ್ಲಿ ಪ್ರಾಣಿಗಳ ಅಧ್ಯಯನವನ್ನು ಆಧರಿಸಿದೆ ಆದರೆ ಮಾನವರಲ್ಲಿ ಇದೇ ರೀತಿಯ ಸಕಾರಾತ್ಮಕ ಪರಿಣಾಮಗಳ ಭರವಸೆಯನ್ನು ತೋರಿಸುತ್ತದೆ.

ಕಪ್ಪು ಏಲಕ್ಕಿ:
ಕಪ್ಪು ಏಲಕ್ಕಿಯನ್ನು ಸೇವಿಸುವುದರಿಂದ ವಿವಿಧ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲಗಳನ್ನು ಸರಿಯಾಗಿ ನಿಯಂತ್ರಣದಲ್ಲಿಡುತ್ತದೆ. ಇದು ನಿಮ್ಮ ಹಸಿವನ್ನು ಸುಧಾರಿಸುತ್ತದೆ ಮತ್ತು ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಗ್ಯಾಸ್ ಮತ್ತು ಉಬ್ಬುವಿಕೆಯ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ. ಅಲ್ಲದೆ, ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ರಕ್ತದೊತ್ತಡವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಮಸಾಲೆಯು ಬೇಸಿಗೆಯಲ್ಲಿ ಶಾಖದ ಹೊಡೆತದಿಂದ ನಮ್ಮನ್ನು ರಕ್ಷಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

​ರಕ್ತದೊತ್ತಡ ನಿಯಂತ್ರಣ:
ಅಧಿಕ ರಕ್ತದೊತ್ತಡ ಹೊಂದಿರುವ ಜನರು ಏಲಕ್ಕಿಯಿಂದ ಪರಿಹಾರವನ್ನು ಪಡೆಯಬಹುದು. ಇದರ ಮೂತ್ರವರ್ಧಕ ಗುಣಲಕ್ಷಣಗಳು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ, ಹೆಚ್ಚುವರಿ ನೀರನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.