


ಡೈಲಿ ವಾರ್ತೆ: 24/ಫೆ. /2025


ಶ್ರೀ ಅಘೋರೇಶ್ವರ ಕಲಾರಂಗದ ನೂತನ ಅಧ್ಯಕ್ಷರಾಗಿ ನಿತ್ಯಾನಂದ ನಾಯರಿ ಆಯ್ಕೆ
ಕೋಟ: ಶ್ರೀ ಅಘೋರೇಶ್ವರ ಕಲಾರಂಗ (ರಿ) ಕಾರ್ತಟ್ಟು ಇದರ ನೂತನ ಅಧ್ಯಕ್ಷರಾಗಿ ರೋಟರಿ ಕೋಟ ಸಿಟಿಯ ಮಾಜಿ ಅಧ್ಯಕ್ಷ, ಉದ್ಯಮಿ ನಿತ್ಯಾನಂದ ನಾಯರಿ ಕಾರ್ತಟ್ಟು ಆಯ್ಕೆಯಾಗಿರುತ್ತಾರೆ.
ನಿನ್ನೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗೌರವಧ್ಯಾಕ್ಷರಾಗಿ ಶ್ರೀ ಚಂದ್ರ ಶೇಖರ ಕಾರಂತ ಕಾರ್ತಟ್ಟು, ಅಧ್ಯಕ್ಷರಾಗಿ ನಿತ್ಯಾನಂದ ನಾಯರಿ, ಉಪಾಧ್ಯಕ್ಷರಾಗಿ ಶ್ಯಾಮ ಸುಂದರ್ ನಾಯರಿ ಕಾರ್ಯದರ್ಶಿ ಶಿವಾನಂದ ನಾಯರಿ, ಕೋಶಾಧಿಕಾರಿ ಶ್ರೀಮತಿ ರೇವತಿ ಶ್ಯಾಮ ಸುಂದರ್, ಸಂಘಟನಾ ಕಾರ್ಯದರ್ಶಿ ಗಳಾಗಿ ರಾಧಾಕೃಷ್ಣ ಬ್ರಹ್ಮಾವರ್, ಕ್ರೀಡಾ ಕಾರ್ಯದರ್ಶಿ ಸತ್ಯನಾರಾಯಣ ಆಚಾರ್, ಸಾಂಸ್ಕೃತಿಕ ಕಾರ್ಯದರ್ಶಿ ಗಳಾಗಿ ಶ್ರೀಮತಿ ಸ್ನೇಹ ವೆಂಕಟೇಶ್ ಆಯ್ಕೆಯಾಗಿರುತ್ತಾರೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವ ಸಂಸ್ಥೆಯು ಅಶಕ್ತರಿಗೆ ಆರ್ಥಿಕ ನೆರವು, ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ಮುಂತಾದ ಕಾರ್ಯಗಳನ್ನು ಮಾಡುತ್ತ ಸಂಸ್ಥೆಯು ಎಪ್ರಿಲ್ ತಿಂಗಳಿನಲ್ಲಿ ವಾರ್ಷಿಕೋತ್ಸವ “ಸಮ್ಮಿಲನ” ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸುವ ಬಗ್ಗೆ ತೀರ್ಮಾಸಲಾಗಿದೆ ಎಂದು ಕಲಾರಾಂಗದ ಜೊತೆ ಕಾರ್ಯದರ್ಶಿ ನಾಗರಾಜ್ ಐತಾಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.