

ಡೈಲಿ ವಾರ್ತೆ: 24/ಫೆ. /2025


ಕಾಪು | ನಾಯಿಮರಿಗೆ ವಿಷ ಹಾಕಿ ಕೊಂದ ಆರೋಪಿಯ ವಿರುದ್ಧ ಪ್ರಕರಣ ದಾಖಲು

ಕಾಪು: ಕಾಪುವಿನ ಸಮಾಜ ಸೇವಕಿ ಬಿಂದು ಎಂಬವರು ಸಾಕುತ್ತಿದ್ದ ದೇಸಿ ನಾಯಿ ಮರಿಗೆ ಕುಮಾರ ಎಂಬವರು ವಿಷ ಪದಾರ್ಥ ಹಾಕಿ ಕೊಂದಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಮಾಜ ಸೇವಕಿಯಾಗಿ ಕೆಲಸ ಮಾಡಿಕೊಂಡಿರುವ ಬಿಂದು ಅವರು, ಐದು ವರ್ಷಗಳ ಹಿಂದೆ ಒಂದು ದೇಸಿ ನಾಯಿಮರಿಯನ್ನು ಸಾಕಿದ್ದು, ಅದು ಕಳೆದ ಆರು ತಿಂಗಳಿನಿಂದ ಗಡ್ಡೆ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಬಳಿಕ ಗುಣಮುಖಹೊಂದುತ್ತಿದೆ.
ಈ ನಡುವೆ ಫೆ.21 ರಂದು ರಾತ್ರಿ 11.00 ಗಂಟೆಯಿಂದ ಫೆ. 22ರ ಬೆಳಿಗ್ಗೆ 7 ಗಂಟೆಯ ನಡುವೆ ಕುಮಾರ್ ಎಂಬವರು ಮನೆಯ ಅಂಗಳದಲ್ಲಿ ನಾಯಿ ಮರಿಗೆ ವಿಷ ಪದಾರ್ಥ ಹಾಕಿ ಕೊಂದಿರುವುದಾಗಿ ದೂರಲಾಗಿದೆ.
ಕಾಪು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.