ಡೈಲಿ ವಾರ್ತೆ: 26/ಫೆ. /2025

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ : ಕ್ರಿಯೇಟಿವ್ ಸಾಧನೆ

ಕಾರ್ಕಳ| ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ( ಎನ್ ಟಿ ಎ ) ವತಿಯಿಂದ ನಡೆಸಲಾದ ಜೆಇಇ ಬಿ ಆರ್ಕ್ ಮತ್ತು ಜೆಇಇ ಬಿ ಪ್ಲಾನಿಂಗ್ ನ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಈ ವರ್ಷವೂ ಅತ್ಯುನ್ನತ ಫಲಿತಾಂಶ ಪಡೆದುಕೊಂಡಿದೆ.

ಬಿ ಆರ್ಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ 99.4223451 ಪರ್ಸೆಂಟೈಲ್, ಸಾಚಿ ಶಿವಕುಮಾರ್ ಕಡಿ 99.3362631 ಪರ್ಸೆಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ.

ಬಿ ಪ್ಲಾನಿಂಗ್ ಫಲಿತಾಂಶದಲ್ಲಿ ತೇಜಸ್ ವಿ ನಾಯಕ್ 99.5751775 ಪರ್ಸೆಂಟೈಲ್ ಗಳಿಸಿದ್ದಾರೆ.
ಹೀಗೆ ಒಟ್ಟು ಫಲಿತಾಂಶದಲ್ಲಿ 99 ಪರ್ಸೆಂಟೈಲಿಗಿಂತ ಅಧಿಕ 2 ವಿದ್ಯಾರ್ಥಿಗಳು, 97 ರಿಂದ ಅಧಿಕ 3, 95ಕ್ಕಿಂತ ಅಧಿಕ 8 ಹಾಗೂ 16 ವಿದ್ಯಾರ್ಥಿಗಳು 90 ಪರ್ಸೆಂಟೈಲಿಗಿಂತ ಅಧಿಕ ಫಲಿತಾಂಶವನ್ನು ದಾಖಲಿಸಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದದವರು ಹಾಗೂ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಸಂಯೋಜಕರಾದ ಸುಮಂತ್ ದಾಮ್ಲೆ ರವರು ಅಭಿನಂದಿಸಿ ಶ್ಲಾಘಿಸಿದ್ದಾರೆ.