

ಡೈಲಿ ವಾರ್ತೆ: 26/ಫೆ. /2025


ಬೆಳಗಾವಿ| ಗ್ಯಾಸ್ ಕಟರ್ ಮಷಿನ್ ಬಳಸಿ ಎಟಿಎಂನಿಂದ ಹಣ ಲೂಟಿ!

ಬೆಳಗಾವಿ : ಗ್ಯಾಸ್ ಕಟರ್ ಮಷಿನ್ ಬಳಸಿ ದುಷ್ಕರ್ಮಿಗಳು ಎಟಿಎಂ ಹಣ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಸಾಂಬ್ರಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಎಸ್ಬಿಐ ಬ್ಯಾಂಕ್ ಎಟಿಎಂ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂ ಕಳ್ಳತನ ಮಾಡಿದ್ದಾರೆ. ಎಟಿಎಂನಲ್ಲಿದ್ದ 75,600 ರೂಪಾಯಿ ಹಣ ಕದ್ದೊಯ್ದಿದ್ದಾರೆ.
ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕೂಡ ಆಗಮಿಸಿ ಮಾಹಿತಿ ಪಡೆದಿದ್ದಾರೆ.