ಡೈಲಿ ವಾರ್ತೆ: 26/ಫೆ. /2025

ಗಂಗೊಳ್ಳಿ| ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಪ್ರೇರಣಾತ್ಮಕ ಗೌರವ ಸನ್ಮಾನ ಕಾರ್ಯಕ್ರಮ

ಗಂಗೊಳ್ಳಿ| ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ತೌಹೀದ್ ಮಹಿಳಾ ಪದವಿಪೂರ್ವ ಮತ್ತು ಪದವಿ ಕಾಲೇಜು ಗಂಗೊಳ್ಳಿಯಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರಿಗೆ ಪ್ರೇರಣಾತ್ಮಕ ಗೌರವ ಸನ್ಮಾನ ಕಾರ್ಯಕ್ರಮ ಫೆ. 25 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತಜೋಸಫ್ ಆಸ್ಪತ್ರೆ, ಮಂಗಳೂರು ಇಲ್ಲಿನ ಹಿರಿಯ ಮನಃಶಾಸ್ತ್ರಜ್ಞರಾದ ಜೋಯಲ್ ಕೆ ಟಾಮ್, ಮನಃಶಾಸ್ತ್ರಜ್ಞರಾದ ಹರ್ಷಿತ, ತೌಹೀದ್ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ಅಖ್ತರ್ ಅಹಮದ್ ಖಾನ್, ತೌಹೀದ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ತಾಹೀರ್ ಹಸನ್, ತೌಹೀದ್ ಮಹಿಳಾ ಕಾಲೇಜುಗಳ ಪ್ರಾಂಶುಪಾಲೆ ಶ್ರೀಮತಿ ಆಶಾ ನಾಯಕ್ ಮತ್ತು ಶ್ರೀಮತಿ ಸಮೀನಾ ಬುಖಾರಿ, ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಬಾ ಬಾನುರವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಿರಾತ್ ಪಠಿಸುವ ಮೂಲಕ ಮೌಲಾನ ಅಬ್ದುಲ್ ಬರ್ರ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾದ ಜೋಯಲ್ ಅವರು ಪೋಷಕರು ಅವರ ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು, ಆರೋಗ್ಯಕರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗುವಂತೆ ಬೆಂಬಲವಾಗಿರಬೇಕು ಎಂದು ಹಿತ ನುಡಿಗಳನ್ನಾಡಿದರು. ತೌಹೀದ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಮೊಹಮ್ಮದ್ ಇಕ್ಬಾಲ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮನೆಯೇ ಮೊದಲ ಪಾಠ ಶಾಲೆ, ಪೋಷಕರೇ ಮೊದಲ ಗುರು ಎಂದು ಹೇಳಿ ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ವರ್ಗದವರ ಸೇವೆಯನ್ನು ಅಭಿನಂದಿಸಿದರು.

ನಂತರ ಸಂಸ್ಥೆಯಲ್ಲಿ ಹತ್ತು ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಶಿಕ್ಷಕ ಶಿಕ್ಷಕೇತರ ವರ್ಗದವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರಿಗೆ ಅತ್ಯುತ್ತಮ ನಾಯಕತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಷಯವಾರು ಶೇಕಡ 100 ಫಲಿತಾಂಶ ಸಾಧಿಸಿದ ಶಿಕ್ಷಕರನ್ನು ಅಭಿನಂದಿಸಿ ಗೌರವಿಸಲಾಯಿತು. ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಗೌರವ ಸ್ವೀಕರಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಮೀನಾ ಬುಖಾರಿ, ಶಿಕ್ಷಕಿ ಅಶ್ವಿನಿ ಬಿ ಮತ್ತು ಜ್ಯೋತಿ ಎಂ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಫಾತಿಮಾ ಅಕ್ಸಾ ಕಾರ್ಯಕ್ರಮದ ನಿರೂಪಣೆಗೈದರು. ಶಿಕ್ಷಕಿ ಪ್ರಿಯಾಂಕಾ ಪಿಂಟೋ ಸ್ವಾಗತ ಭಾಷಣಗೈದರು. ಸವಿತಾ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಅಲ್ ಫರ್ಜಾನ ಸನ್ಮಾನಿತರ ಮತ್ತು ವಿಜೇತರ ಪಟ್ಟಿಗಳನ್ನು ವಾಚಿಸಿದರು. ಮೌಲಾನ ಸಿಬ್ಗತುಲ್ಲ ದುವಾ ಹೇಳಿದರು.