ಡೈಲಿ ವಾರ್ತೆ: 26/ಫೆ. /2025

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಜಿ. ಮೊಹಮ್ಮದ್ ಗುಲ್ವಾಡಿಯವರಿಗೆ ಸನ್ಮಾನ

ಕುಂದಾಪುರ: ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ, ಹಿರಿಯ ಕಾಂಗ್ರೆಸ್ ಮುಖಂಡ ಜಿ. ಮೊಹಮ್ಮದ್ ಗುಲ್ವಾಡಿಯವರು

ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಜಿ. ಮೊಹಮ್ಮದ್ ಗುಲ್ವಾಡಿಯವರು ಗುಲ್ವಾಡಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿ,
ಗ್ರಾಮಸ್ಥರ ಹಿತ ರಕ್ಷಣಾ ಗುಲ್ವಾಡಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೆಹರಾಜ್ ಜುಮ್ಮಾ ಮಸ್ಜಿದ್ ಗುಲ್ವಾಡಿ ಇದರ ಉಪಾಧ್ಯಕ್ಷರಾಗಿ, ಗುಲ್ವಾಡಿ ಗಣೇಶ ಉತ್ಸವದ ಮಾಜಿ ಉಪಾಧ್ಯಕ್ಷರಾಗಿ, ತಲ್ಲೂರು ವಿದ್ಯುತ್ ಸಲಹೆ ಸಮಿತಿಯ ಮಾಜಿ ಸದ್ಯಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.

ಪ್ರಸ್ತುತ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರಾಗಿರುವ ಜಿ. ಮೊಹಮ್ಮದ್ ಗುಲ್ವಾಡಿ,
ಜಮೀಯತುಲ್ ಫಲಹ ಕುಂದಾಪುರ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಸರ್ಯೋದಯ ಪ್ರಾಥಮಿಕ ಶಾಲೆಯ ಉಪಾಧ್ಯಕ್ಷರಾಗಿ, ಎನ್ ಎನ್ ಒ (ನಮ್ಮ ನಾಡು ಒಕ್ಕೂಟ) ಕಮ್ಯುನಿಟಿ ಸೆಂಟರ್ ಕುಂದಾಪುರ ಇದರ ಉಪಾಧ್ಯಕ್ಷರಾಗಿ, ಜಿಲ್ಲಾ ಘಟಕದ ಸದಸ್ಯರಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಪೂರ್ವ ಉಪಾಧ್ಯಕ್ಷರಾಗಿರುವ ಇವರು, ಹಲವು ಸಂಸ್ಥೆ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರನ್ನು ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ನ ವತಿಯಿಂದ ಸನ್ಮಾನಿಸಲಾಯಿತು.

ಸಭಾಧ್ಯಕ್ಷತೆಯನ್ನು ಎನ್ ಎನ್ ಒ ಕಮ್ಯುನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ವಹಿಸಿದರು.

ಈ ಸಂದರ್ಭದಲ್ಲಿ ಎನ್ ಎನ್ ಒ ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್,ಕುಂದಾಪುರ ಪುರಸಭೆಯ ಸ್ಟಾಯಿ ಸಮಿತಿಯ ಅಧ್ಯಕ್ಷ ರಾದ ವಿ ಪ್ರಭಾಕರ ಕುಂದಾಪುರ, ಎನ್ ಎನ್ ಒ ಉಡುಪಿ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ನಾಖುದಾ, ಜಿಲ್ಲಾ ಮಾಜಿ ಉಪಾಧ್ಯಕ್ಷ ಇರ್ಷಾದ್ ನೆಜಾರ್, ಸದ್ಯಸ್ಯರಾದ ಶಾಬಾನ್ ಹಂಗಳೂರ್, ಮುನಾಫ್ ಕಂಡ್ಲೂರ್,ಅಬೂಬಕ್ಕರ್ ಮಾವಿನಕಟ್ಟೆ,ಅಕ್ರಮ್ ಉಡುಪಿ, ಹ್ಯಾರಿಸ್ ಹೆಮ್ಮಾಡಿ ಕಾರ್ಯಕ್ರಮ ದ ಸಂಚಾಲಕರಾದ ಜಮಾಲ್ ಗುಲ್ವಾಡಿ, ಸಹ ಸಂಚಾಲಕರಾದ ಮುನಾಫ್ ಕೋಡಿ, ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.