ಡೈಲಿ ವಾರ್ತೆ: 26/ಫೆ. /2025

ಕೋಟ| ಅಕ್ರಮ ಮರಳು ಸಾಗಾಟ – ಚಾಲಕ ಹಾಗೂ ಟಿಪ್ಪರ್ ವಶಕ್ಕೆ

ಕೋಟ: ಬ್ರಹ್ಮಾವರ ತಾಲ್ಲೂಕು ಕೋಟ ಮಣೂರು ಗ್ರಾಮದ ರಾಜಲಕ್ಷ್ಮೀ ಸಭಾ ಭವನದ ಬಳಿ ಸರ್ವೀಸ್‌ ರಸ್ತೆಯಲ್ಲಿ ಕೋಟ ಪೊಲೀಸ್ ಠಾಣಾ ಪಿಎಸ್‌ಐ ರಾಘವೇಂದ್ರ ಸಿ. ಅವರು ನಿಂತು ವಾಹನ ತಪಾಸಣೆ ಮಾಡುತ್ತಿರುವಾಗ ತೆಕ್ಕಟ್ಟೆ ಕಡೆಯಿಂದ ಕೋಟ ಕಡೆಗೆ ಸರ್ವೀಸ್‌ ರಸ್ತೆಯಲ್ಲಿ ಬರುತ್ತಿದ್ದ KA21.A.9993 ನಂಬರ್ ನ ಟಿಪ್ಪರನ್ನು ನಿಲ್ಲಿಸಿ ಚಾಲಕನ ಬಳಿ ವಿಚಾರಿಸಿದಾಗ
ಚಾಲಕ ತಾನು ಮೊಳಹಳ್ಳಿಯಿಂದ ಮರಳನ್ನು ತುಂಬಿಸಿಕೊಂಡು ಬೇಳೂರು, ತೆಕ್ಕಟ್ಟೆ ಮಾರ್ಗವಾಗಿ ಬಂದಿರುವುದಾಗಿ ತಿಳಿಸಿದ್ದು ಈ ಬಗ್ಗೆ ಪರವಾನಿಗೆ ಇದೇಯೇ ಎಂಬುದರ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿರುತ್ತಾನೆ.

ಬಳಿಕ ಚಾಲಕನ ಹೆಸರು ವಿಳಾಸ ವಿಚಾರಿಸಿದಲ್ಲಿ ತನ್ನ ಹೆಸರು ಇಲಿಯಾಸ್‌ ಎಂಬುದಾಗಿ. ಮರಳನ್ನು ತಾನು ಮೊಳಹಳ್ಳಿಯ ಉಮೇಶರವರ ಮರಳು ಯಾರ್ಡ್ ನಿಂದ ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ.

ಇದರಲ್ಲಿ ಸುಮಾರು 3 ಟನ್‌ ನಷ್ಟು ಮರಳು ಇದ್ದು ಮರಳಿನ ಅಂದಾಜು ಮೌಲ್ಯ ಸುಮಾರು 9000/ ಆಗಬಹುದು. ಟಿಪ್ಪರ ಚಾಲಕ ಇಲಿಯಾಸ್‌ ಮತ್ತು ಉಮೇಶ ರವರುಗಳು ಯಾವುದೇ ಪರವಾನಿಗೆ ಇಲ್ಲದೇ ಸರ್ಕಾರಿ ಜಾಗದಿಂದ ಲಾಭಗಳಿಸುವ ಉದ್ದೇಶಗೋಸ್ಕರ ಸಂಘಟಿತವಾಗಿ ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡಿ ಸ್ವಂತ ಲಾಭಗೋಸ್ಕರ ಬೇರೆಯವರಿಗೆ ಮಾರಾಟ ಮಾಡಲು ಹೋಗುತ್ತಿರುವುದರಿಂದ ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2025 ಕಲಂ: US 303 (2), 112 RW 3 (5) B.N.S. & US 4, 4(1A), 21 M.M.R.D. Act ನಂತೆ ಪ್ರಕರಣ ದಾಖಲಾಗಿರುತ್ತದೆ.