ಡೈಲಿ ವಾರ್ತೆ: 08/ಮಾರ್ಚ್ /2025

ಗದಗ| ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ

ಲಕ್ಷ್ಮೇಶ್ವರ| ಮಕ್ಕಳಿಗೆ ಶಿಕ್ಷಕರು ಎಷ್ಟು ಅವಶ್ಯವೋ ಅಷ್ಟೆ ತಂದೆ ತಾಯಿಯರ ಜವಾಬ್ದಾರಿ ಮುಖ್ಯವಾಗಿದೆ.
ಈಗ ಕಲಿಯುತ್ತಿರುವ ಮಕ್ಕಳು ಮೊಬೈಲ್ ಮೋಹಕ್ಕೆ ಒಳಗಾಗದೆ, ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಪಡೆದು ತಾವು ಕಲಿತ ಶಾಲೆಗೆ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಬೇಕೆಂದರು.


ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದರು. ನಮ್ಮ ಶಾಲೆ ನಮ್ಮ ಹೆಮ್ಮೆ. ಖಾಸಗಿ ಶಾಲೆಗಿಂತ ನಮ್ಮ ಶಾಲೆ ಯಾವುದರಲ್ಲೂ ಕಡಿಮೆ ಇಲ್ಲ. ಯಾವೊಬ್ಬ ಮಗುವೂ ಶಾಲೆ ಬಿಡದಂತೆ ನೋಡಿಕೊಳ್ಳುತ್ತೇವೆ. ಇಲ್ಲಿಯೂ ಪೂರ್ವ ಪ್ರಾಥಮಿಕ ತರಗತಿಯನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಪ ನಿರ್ದೇಶಕರಾದ ಆರ್ ಎಸ್ ಬುರಡಿ ಅವರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು.

ಇದರ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ಅಷ್ಟಕ್ಕಷ್ಟೇ. ಹಾಗೊಂದು ವೇಳೆ ಕೊಟ್ಟರೂ ಅದು ಶಾಲೆಗಳ ಅಭಿವೃದ್ಧಿಗೆ ಸಾಕಾಗದು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡರಕಟ್ಟಿ ಶಾಲೆಯ ಗುರುಮಾತೆಯರಾದ ಶ್ರೀಮತಿ ಪಿ. ಬಿ. ಗುರುಮಠ ರವರ ಹಿರಿಯ ಸಹೋದರ ಶ್ರೀ ಪ್ರದೀಪ ಬ ಗುರುಮಠ, ಬಿ.ಇ (ಅಮೆರಿಕದ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ) ಹಾಗೂ ಮತ್ತೋರ್ವ ಕಿರಿಯ ಸಹೋದರ ಡಾ.ವಿನಯ್ ಬ ಗುರುಮಠ (ಖ್ಯಾತ ನರರೋಗ ತಜ್ಞರು ದುಬೈಯಲ್ಲಿ ಸೇವೆ ಸಲ್ಲಿಸುತ್ತಿದ್ದು) ಇವರು, ತಮ್ಮ ಮಾತೋಶ್ರೀಯವರಾದ ದಿವಂಗತ ಶ್ರೀಮತಿ ಪುಷ್ಪಾವತಿ ಬಸಯ್ಯ ಗುರುಮಠ ಇವರ ಸ್ಮರಣಾರ್ಥ ನಮ್ಮ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ ಶಾಲೆಯ ಮುಂದಿನ ಕಾರ್ಯಕ್ರಮ ವೇದಿಕೆಗೆ ಮೇಲ್ಛಾವಣಿ ನಿರ್ಮಿಸಿ ಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಹೇಮಾ ಶಿವಪ್ಪ ಮಂಟೂರ, ಶಾಲೆಯ ವಿದ್ಯಾರ್ಥಿನಿ 2023-24ನೇ ಸಾಲಿನಲ್ಲಿ ಶಾಲೆಗೆ ಎಸ್ಎಸ್ಎಲ್ಸಿ ಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿನಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು, 2024 -25 ನೇ ಸಾಲಿನ ಆದರ್ಶ ವಿದ್ಯಾರ್ಥಿಗಳಾಗಿ ಆಯ್ಕೆಯಾದ 7ನೇ ವರ್ಗದ ನಿಂಗರಾಜ ಹವಳದ, ಪ್ರತಿಕ್ಷಾ ಹಮ್ಮಿಗಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶ್ರೀಮತಿ ಜಯಶ್ರೀ ವೀರೇಶ ಭಂಗಿ ಎಸ್ ಡಿ ಎಮ್ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉದ್ಘಾಟಕರಾಗಿ ಉಪನಿರ್ದೇಶಕರಾದ ಆರ್ ಎಸ್ ಬುರಡಿ, ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕರ ಕಾರ್ಯಾಲಯದ ಡಿವಾಯ್ ಪಿಸಿ ಎಂ ಎಚ್ ಕಂಬಳಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಸ್ ಹರ್ಲಾಪೂರ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಎಂ ಎಂ ಹವಳದ, ಮಾಂತೇಶ ಹವಳದ, ಬಸಪ್ಪ ಫಕೀರಪ್ಪ ಹವಳದ(ಶಾಲಾ ಭೂ ದಾನಿಗಳು), ನಿಂಗಪ್ಪ ಎಸ್ ಪ್ಯಾಟಿ, ಪವಿತ್ರಾ ಗಡಿಯಪ್ಪನವರ, ಕಮಲವ್ವ ಲಮಾಣಿ, ಸೋಮಣ್ಣ ಹವಳದ, ಹರೀಶ್ ಲಮಾಣಿ, ಚಂದ್ರಕಾಂತ ನೇಕಾರ, ಎಂ ಎ ನದಾಫ್, ಎಂ ಡಿ ವಾರದ, ಬಿ ಎಂ ಯರಗುಪ್ಪಿ, ಶಿವಾನಂದ ಅಸುಂಡಿ, ಗೀತಾ ಹಳ್ಯಾಳ, ಎಂ ಎಸ್ ಹಿರೇಮಠ, ಶ್ರೀಮತಿ ಪಿ ಬಿ ಗುರುಮಠ/ಸಹೋದರರು(ವೇದಿಕೆ ಮೇಲ್ಚಾವಣಿ ನಿರ್ಮಾಣದ ಕೊಡುಗೆ ದಾನಿಗಳು), ಮಾಂತೇಶ್ ಅಂಗಡಿ (ಪೆಂಡಲ್ ಸ್ಕ್ರೀನ್ ಕೊಡುಗೆ ದಾನಿಗಳು), ಎಸ್ ಡಿ ಎಂ ಸಿ ಸದಸ್ಯರುಗಳಾದ- ಕುಮಾರಣ್ಣ ಚಕ್ರಸಾಲಿ, ಯಲ್ಲಪ್ಪ ಗಡಿಯಪ್ಪನವರ, ರವಿನಾಯಕ ದೇವರಮನಿ, ದೀಪಾ ಪಾಟೀಲ, ರಾಜೇಶ್ವರಿ ಬಡಿಗೇರ, ರಸುಲ್ ಸಂಕ್ಲಿಪುರ, ಹನುಮಂತಪ್ಪ ಲಮಾಣಿ, ದಿಲ್ಶಾದ್ ಕಿತ್ತೂರ, ಧರ್ಮಪ್ಪ ಲಮಾಣಿ, ವಿನಾಯಕ ಮರಾಠೆ, ಬಸವರಾಜ ಬಾಡಗಿ, ಮಂಜಕ್ಕ ಹರಿಜನ,ವಿಶ್ವನಾಥ ಬೊಮ್ಮನಹಳ್ಳಿ,ಮಾಂತೇಶ್ ಮತ್ತಿಕಟ್ಟಿ,ಸುಜಾತಾ ಹಿರೇಮಠ,ಶಾರದಾ ಹವಳದ
ಶ್ರೀಮತಿ ಪಿ.ಬಿ ಗುರುಮಠ ಶ್ರೀಮತಿ ಎಸ್.ಸಿ ಹಿರೇಮಠ ಶ್ರೀಮತಿ ಎಸ್.ಎಂ ಕೌಜಗೇರಿ, ಶ್ರೀಮತಿ ಕೆ.ಎಂ ಕೊಟ್ರವ್ವ ರವರು ಪ್ರಾರ್ಥಿಸಿದರು,ಶ್ರೀಮತಿ ಎಂ.ವೈ ನೀಲನಾಯ್ಕರ್ ಸ್ವಾಗತಿಸಿದರು, ಶ್ರೀಮತಿ ಎಸ್.ಎಚ್.ಉಮಚಗಿ (ಪ್ರ. ಗು) ವಾರ್ಷಿಕ ವರದಿ ಮಂಡಿಸಿದರು , ಶ್ರೀ ಕಿರಣಕುಮಾರ್ ಕಲಿವಾಳ ವಂದಿಸಿದರು, ಶ್ರೀ ಡಿ ಡಿ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಪಿ. ಸಿ ಕಾಳಶೆಟ್ಟಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.