

ಡೈಲಿ ವಾರ್ತೆ: 08/ಮಾರ್ಚ್ /2025


ಕ್ರಾಸ್‌ಲ್ಯಾಂಡ್ ನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ: ವರ್ಷದಲ್ಲಿ ಒಂದು ದಿನವಾದರೂ ಅಮ್ಮಂದಿರಿಗೆ ಸಮಯ ನೀಡಿ – ಕಿರುತೆರೆ ನಟಿ ದೀಕ್ಷಾ

ಬ್ರಹ್ಮಾವರ| ವರ್ಷದ ಎಲ್ಲ ದಿನ ಮಕ್ಕಳ ಶ್ರೇಯಸ್ಸಿನ ಬಗ್ಗೆ ಚಿಂತಿಸುವ, ದುಡಿಯುವ ಅಮ್ಮಂದಿರಿಗೆ ಮಹಿಳಾ ದಿನಾಚರಣೆಯ ದಿನವಾದರೂ ವಿಶ್ರಾಂತಿ ನೀಡುವ ಸ್ವಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿರುತೆರೆ ನಟಿ ಬ್ರಹ್ಮಾವರದ ದೀಕ್ಷಾ ಎಸ್.ಎಂ ಕರೆ ನೀಡಿದರು.

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್‌ಕಾಲೇಜಿನಲ್ಲಿ ಶನಿವಾರ ಐಕ್ಯೂಎಸಿ ಮತ್ತು ಮಹಿಳಾ ವೇದಿಕೆಯ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಉಡುಪಿಯ ನ್ಯಾಯವಾದಿ ಹಾಗೂ ಮಾನವಹಕ್ಕುಗಳ ಹೋರಾಟಗಾರ್ತಿ ವಿಜಯಲಕ್ಷ್ಮೀ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ರಾಬರ್ಟ್‌ಕ್ಲೈವ್‌ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆಯ ಸಂಚಾಲಕಿ ಪೂರ್ಣಿಮಾ, ಉಪಪ್ರಾಂಶುಪಾಲ ಬಿಜು ಜೇಕಬ್ ಇದ್ದರು.
ವಿದ್ಯಾರ್ಥಿನಿಯರಾದ ರಚನಾ ಸ್ವಾಗತಿಸಿದರು. ಐಶ್ವರ್ಯ ಸನ್ಮಾನಿತರ ಪರಿಚಯ ನೀಡಿದರು. ಸಾಧ್ವಿ ವಂದಿಸಿದರು. ಬರ್ನಿಸ್‌ಕಾರ್ಯಕ್ರಮ ನಿರೂಪಿಸಿದರು.