

ಡೈಲಿ ವಾರ್ತೆ: 09/ಮಾರ್ಚ್ /2025


ಶ್ರೀ ಬಬ್ಬು ಸ್ವಾಮಿ ದೈವದ ಸಿರಿ ಸಿಂಗಾರದ ನೇಮೋತ್ಸವಕ್ಕೆ ಮಣಿಪಾಲ ಆಟೋ ಚಾಲಕ ಮಾಲಕ ಸಂಘದಿಂದ ಹಸಿರು ಹೊರೆ ಕಾಣಿಕೆ

ಮಣಿಪಾಲ| ಮಣಿಪಾಲ ಶ್ರೀ ಬಬ್ಬು ಸ್ವಾಮಿ ದೈವದ ಸಿರಿ ಸಿಂಗಾರದ ನೇಮೋತ್ಸವ ಅಂಗವಾಗಿ ಅಟೋ ಚಾಲಕರ ಮತ್ತು ಮಾಲಕರ ಸಂಘ( ರಿ) ಮಣಿಪಾಲ ಇದರ ವತಿಯಿಂದ ಹಸಿರು ಹೊರೆ ಕಾಣಿಕೆ ಸಂಘದ ಅಧ್ಯಕ್ಷ ಸುಕೇಶ್ ಸುವರ್ಣ ರವರ ಅಧ್ಯಕ್ಷತೆಯಲ್ಲಿ, ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ, ನಿಕಟ ಪೂರ್ವ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಅವರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರ ಸಹಕಾರ ದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಹಸಿರು ಹೊರೆ ಕಾಣಿಕೆಯ ಉದ್ಘಾಟನಾ ಸಮಾರಂಭವನ್ನು ಶ್ರೀಯುತ ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ಮಣಿಪಾಲ ಪೊಲೀಸ್ ಠಾಣಾಧಿಕಾರಿ ಶ್ರೀಯುತ ದೇವರಾಜ್, ಹಾಗೂ ಎಲ್ಲಾ ಹಿರಿಯ ಅತಿಥಿ, ಸರ್ವಸದಸ್ಯರ ಸಮ್ಮುಖದಲ್ಲಿ ನೇಯ್ದಪಟ್ಟಿ(ribbon) ಅನ್ನು ಕತ್ತರಿಸುವ ಮೂಲಕ ಉದ್ಘಾಟನಾ ನೆರವೇರಿಸಿದರು.

ಸಂಘದ ಗೌರವ ಸಲಹೆಗಾರರಾದ ಅಂಜಾರ್ ಸುಧಾಕರ್ ಶೆಟ್ಟಿ ಹಾಗೂ ಗೌರವಿತ ಅತಿಥಿಗಳು ಸೇರಿ ತುಳುನಾಡಿನ ಧ್ವಜವನ್ನು ಹಾರಿಸುವ ಮೂಲಕ ಹಸಿರು ಹೊರೆ ಕಾಣಿಕೆಯ ಚಾಲನೆಯನ್ನು ನೀಡಿದರು.

ಸಂಘದ ಎಲ್ಲಾ ಸದಸ್ಯರು ಮಾಜಿ ಅಧ್ಯಕ್ಷರುಗಳು ಗೌರವ ಸಲಹೆಗಾರರು ಸ್ಥಾಪಕ ಸದಸ್ಯರು, ಹಾಗೂ ಹಿತೈಷಿಗಳು ಭಾಗವಹಿಸಿದ್ದರು.

ಸಂಘದ ಹೊರೆ ಕಾಣಿಕೆಗೆ ಸಹಕಾರವನ್ನು ವಸ್ತು ರೂಪದಲ್ಲಿ ಹಾಗೂ ದೇಣಿಗೆಯ ರೂಪದಲ್ಲಿ ನೀಡಿರುವ ಸಂಘದ ಎಲ್ಲಾ ಆಟೋ ನಿಲ್ದಾಣದಲ್ಲಿ ದುಡಿಯುತ್ತಿರುವ ಸದಸ್ಯರುಗಳಿಗೆ, ನಿಲ್ದಾಣದ ನಾಯಕರುಗಳಿಗೆ, ಸ್ಥಾಪಕ ಸದಸ್ಯರಾದ ಅಶೋಕ್ ಶೆಟ್ಟಿ ಅವರಿಗೆ ಹಾಗೂ ಬಸ್ ಚಾಲಕರು ಮತ್ತು ಮಾಲಕರಿಗೆ,ಉದ್ಯಮಿಗಳಿಗೆ, ಹೋಟೆಲ್ ಉದ್ಯಮಿಗಳಿಗೆ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತಾಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಸಂಘದ ವರವಾಗಿ ಹೃತ್ಪೂರ್ವಕವಾಗಿ ಧನ್ಯವಾದ ಗಳನ್ನು ಅರ್ಪಿಸುತ್ತೇವೆ, ನಮ್ಮ ಸಂಘದ ಸದಸ್ಯರಾದ ಉದಯ್ ಪುತ್ರನ್ ಹಿರೇಬೆಟ್ಟು ಹಾಗೂ ಉದಯ್ ನಾಯ್ಕ್ ಆತ್ರಾಡಿ ಯವರು ಟ್ಯಾಬ್ಲೊ ಅಟೋ, ಪುತ್ರನ್ ಗ್ಯಾಸ್ ಇವರಿಂದ ಪಿಕಪ್ ವಾಹನ ಒದಗಿಸಿದ ನಮ್ಮ ಸಂಘದ ಕ್ರೀಡಾ ಕಾರ್ಯದರ್ಶಿ ಮಹೇಶ್ ಪೂಜಾರಿ ಹಾಗೂ ವಾಹನ ಚಲಾಯಿಸಿದ ನಮ್ಮ ಸಂಘದ ಸದಸ್ಯರಾದ ಶಿವನಂದ್ ಇವರುಗಳು ಹೊರೆ ಕಾಣಿಕೆಯ ಮೆರವಣಿಗೆ ಮೆರುಗು ಬೆಳಗಿಸುವ ಮೂಲಕ ಸಹಕರಿಸಿರುತ್ತಾರೆ ಇವರಿಗೆ ಸಂಘದ ಪರವಾಗಿ ಧನ್ಯವಾದಗಳು. ಮೆರವಣಿಗೆಯಲ್ಲಿ ಪಾಲ್ಗೊಂಡು ಸಹಕರಿಸಿದ ಅಟೋ ರಿಕ್ಷಾ ವಾಹನಗಳ ಚಾಲಕ ಮಾಲಕರಿಗೆ ಸಂಘದ ಪರವಾಗಿ ಧನ್ಯವಾದಗಳು. ಕೊನೆಯ ಹಂತದಲ್ಲಿ ಬಬ್ಬು ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ , ನಮ್ಮ ಸಂಘದ ಪರವಾಗಿ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ್ ಅವರಿಗೆ ನಮ್ಮ ಸಂಘದ ಅಧ್ಯಕ್ಷರಾದ ಸುಕೇಶ್ ಸುವರ್ಣ, ಕೋಶಾಧಿಕಾರಿ ಶೈಲೇಂದ್ರಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ರಿಯಾಜ್, ಜೊತೆ ಕಾರ್ಯದರ್ಶಿಯಾದ ಶಿವ ನಾಯ್ಕ್,ವಿಜಯ್ ಪುತ್ರನ್ ಹಿರೇಬೆಟ್ಟು, ಸ್ಥಾಪಕ ಸದಸ್ಯರಾದ ಅಶೋಕ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಚಂದಪ್ಪ ಪೂಜಾರಿ ಭಾಸ್ಕರ್ ಶೆಟ್ಟಿ, ಇವರೆಲ್ಲರ ಸಮ್ಮುಖದಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಚೆಕ್ ನೀಡುವ ಮೂಲಕ ದೇಣಿಗೆ ಹಸ್ತಾಂತರಿಸಲಾಯಿತು. ಬಬ್ಬು ಸ್ವಾಮಿ ದೈವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಸಮಿತಿಯು ನಮ್ಮ ಸಂಘಕ್ಕೆ ಧನ್ಯವಾದವನ್ನು ಅರ್ಪಿಸಿರುತ್ತಾರೆ. ಮಗದೊಮ್ಮೆ ಎಲ್ಲಾ ನಮ್ಮ ಸಂಘದ ಸದಸ್ಯರುಗಳಿಗೆ ಸಂಘದ ಸಮಿತಿಯ ಪರವಾಗಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.