ಡೈಲಿ ವಾರ್ತೆ: 09/ಮಾರ್ಚ್ /2025

ಉಡುಪಿ| ಬಾರ್‌ನಲ್ಲಿ ದಾವಣಗೆರೆ ಮೂಲದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಉಡುಪಿ : ಸಿಟಿ ಬಸ್ಸು ನಿಲ್ದಾಣದ ಬಳಿಯ ಬಾರ್‌ವೊಂದರಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು, ಹೋಟೆಲು ಮಾಲಕ ಶರತ್ ಶೆಟ್ಟಿಯವರ ಸಹಕಾರದಿಂದ, ಗ್ರಾಹಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ.

ಮೃತ ವ್ಯಕ್ತಿ ದಾವಣಗೆರೆ ಸ್ಟೇಷನ್ ರೋಡಿನ ನಿವಾಸಿ ಟಿ.ಪಿ.ವಿಠಲ್ ಎಂದು ಶಂಕಿಸಲಾಗಿದೆ. ವಾರಸುದಾರರು‌ ಉಡುಪಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.