

ಡೈಲಿ ವಾರ್ತೆ: 10/ಮಾರ್ಚ್ /2025


ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ-ಚಕ್ರವರ್ತಿ ಸೂಲಿಬೆಲೆ: ಹಿಂದೂ ಸಹೋದರರೇ ಬಲಿಯಾಗದಿರಿ ನೀವು ಘೋ ಮುಖದ ಘರ್ಜನೆಗೆ – ನಾಗೇಂದ್ರ ಪುತ್ರನ್ ಕೋಟ

‘ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ’ ಎಂದು ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ‘ಮತಾಂತರ, ಲವ್ ಜಿಹಾದ್ ವಿಚಾರಗಳನ್ನು ಬಿಟ್ಟು ಬಿಡಿ. ಹಿಂದೂಧರ್ಮದಿಂದ ಮತಾಂತರವಾದವರನ್ನ ಮತ್ತೆ ‘ಘರ್ ವಾಪಸಿ’ ಮಾಡುವುದು ಹೇಗೆಂದು ನಮ್ಮ ಯುವಕರನ್ನ ತರಬೇತುಗೊಳಿಸಿ.
ಈಗ ಟೆಸ್ಟ್ ಮ್ಯಾಚ್‌ಗಳು ನಿಂತು ಹೋಗಿವೆ. ಇರುವ ಇಪ್ಪತ್ತು ಓವರ್‌ಗಳಲ್ಲೇ ಬಡಿಯಬೇಕು. ಈ ಸವಾಲುಗಳನ್ನ ಎದುರಿಸಲು ಸಜ್ಜಾಗಬೇಕು. ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ’ ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ಹಿಂದೂ ಸಹೋದರರೇ ಬಲಿಯಾಗದಿರಿ ನೀವು ಘೋ ಮುಖದ ಘರ್ಜನೆಗೆ – ನಾಗೇಂದ್ರ ಪುತ್ರನ್ ಕೋಟ
ಸಮಾಜದಲ್ಲಿ ಕೋಮು ಭಾವನೆಗಳನ್ನು ಸ್ರಷ್ಟಿ ಮಾಡುತ್ತಲೇ ಆ ಮೂಲಖ ತನ್ನ ಸಿರಿವಂತ ಬದುಕನ್ನು ಕಟ್ಟಿ ಕೊಂಡಿರುವ ಸೂಲಿಬೆಲೆ ಈ ಬಾರಿ ಹುಡುಗಿ ಸಿಗದ ಹಿಂದೂ ಗಳು ಅನ್ಯ ಧರ್ಮದ ಯುವತಿಯರನ್ನು ಮದುವೆಯಾಗಿ ಅಂತಾ ಅವನ ಲೆವೆಲ್ ಗೆ ತಕ್ಕಂತೆ ಕರೆ ನೀಡಿದ್ದಾನೆ.
ಅವನು ಕರೆ ಕೊಟ್ಟಂತೆ ಅಕ್ರಮ ಸಂಬಂಧದಿಂದ ನಮ್ಮ ಹಿಂದೂ ಜನ ಸಂಖ್ಯೆ ಜಾಸ್ತಿ ಆಗಲು ಅದೇನು ಫಾರಂ ಕೋಳಿಗಳಾ?
ಈಗಲೂ ಅವಿವಾಹಿತನ ಲೇಬಲ್ ಹಚ್ಚಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಮೊದಲು ತನ್ನ ಪಕ್ಷದ ಸ್ವ ಘೋಷಿತ ಹಿಂದೂ ನಾಯಕರೆಂದು ಹೇಳಿಕೊಂಡು ನಮ್ಮದೇ ಹಿಂದೂ ಹೆಣ್ಣುಗಳನ್ನು ಹರಿದು ಮುಕ್ಕುತ್ತಿರುವವರಿಗೆ ಸಪ್ತಪದಿ ತುಳಿದು ಲಕ್ಷಣವಾಗಿ ಮದುವೆ ಆಗಲು ಕರೆ ನೀಡಲಿ ಮತ್ತು ಅದು ಎಲ್ಲ ಹಿಂದೂ ಹುಡುಗರಿಗೆ ಮಾದರಿಯಾಗಿರುತ್ತೆ.
ಅದನ್ನ ಬಿಟ್ಟು ಭೂತದ ಬಾಯಲ್ಲಿ ಭಗವದ್ಗೀತೆ ಪಠಿಸುವುದು ಸರೀನಾ ಸೂಲಿಬೆಲೆ?. ಒಂದು ಕಾಲದಲ್ಲಿ ಶಾಂತಿ ಸೌಹಾದರ್ತೆ, ಸಹೋದರತೆಯ ಸುಂದರ ಹೂ ತೋಟದಂತಿದ್ದ ದಕ್ಷಿಣ ಕನ್ನಡದ ಕರಾವಳಿಗೆ ಜಿಲ್ಲೆಗಳಿಗೆ ಕಿಚ್ಚನ್ನು ಇಟ್ಟ ಧೂರ್ತರು ಯಾರು? ನಮ್ಮ ಹಿಂದೂ ಅಮಾಯಕ ಯುವಕರಿಗೆ ಜಾತಿಯ ಆಫೀಮನ್ನು ತಿನ್ನಿಸಿ ಅಶಾಂತಿ ಸ್ರಷ್ಟಿ ಮಾಡುವ ಕೆಲಸ ಈ ಚಕ್ರವರ್ತಿ ಸೂಲಿಬೆಲೆಯಂತಹ ಫೇಮೆಂಟ್ ಭಾಷಣ ಗಾರರಿಗೆ ಲಕ್ಷಾಂತರ ರೂಪಾಯಿ ಅಮದನಿ ತರುವ ಐಟಿ ಬಿಟಿ ಉದ್ಯೋಗದಂತೆ , ತನ್ನ ಮಾತಿನ ವ್ಯಭಿಚಾರದಲ್ಲಿ ಸತ್ಯದ ತಲೆ ಮೇಲೆ ಸುಳ್ಳನ್ನು ಸರಾಗವಾಗಿ ಕುಟ್ಟಿ ಅದೆಷ್ಟೋ ಹಿಂದೂ ಯುವಕರ ಬದುಕು, ಸಂಸಾರಗಳು ಬೀದಿಗೆ ಬರಲು ಕಾರಣವಾಗಿರುವ ಇಂತಹವರಿಗೆ ಧಿಕ್ಕಾರವಿರಲಿ. ಭವ್ಯ ಸನಾತನ ಹಿಂದೂ ಧರ್ಮವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸೂಲಿಬೆಲೆ ಬಗ್ಗೆ ನಾನೊಬ್ಬ ಅಪ್ಪಟ ಹಿಂದೂ ಆಗಿ ಕರಾವಳಿಯ ಅವಿಭಜೀತ ಜಿಲ್ಲೆಯ ಯುವಕರಿಗೆ ಹೇಳುತ್ತೇನೆ “ನೀವು ಇಂತಹ ಘೋಮುಖರ ಅಬ್ಬರದ ಭಾಷಣಗಳಿಗೆ ಬಲಿ ಬೀಳದೆ ನಿಮ್ಮ ಬದುಕಿನ ಬಗ್ಗೆ ಯೋಚಿಸಿ ಅಲ್ಲಿ ನಿಮ್ಮ ಮೇಲೆ ಜೀವವಿಟ್ಟುಕೊಂಡಿರುವ ಹೆತ್ತವರಿದ್ದಾರೆ, ನಿಮ್ಮನ್ನೇ ನಂಬಿಕೊಂಡು ಬಂದಿರುವ ಹೆಂಡತಿ ಇದ್ದಾಳೆ, ಕಾಯುತ್ತಿರುವ ಪುಟ್ಟ ಮಕ್ಕಳಿದ್ದಾರೆ, ಸಹೋದರಿ ಇದ್ದಾಳೆ, ನಿಮಗೇನಾದರೂ ಆದರೆ ನಿಮ್ಮ ಕುಟುಂಬ ಪೋಷಿಸಲು ಈ ಸೂಲಿಬೆಲೆ ಬರುತ್ತಾನಾ? ಯೋಚಿಸಿ ಹಿಂದೂ ಯುವಕರೇ. ಸಂಸಾರಸ್ಥರಾಗಿ ನಿಮ್ಮವರೊಂದಿಗೆ ಸುಂದರವಾಗಿ ಬದುಕನ್ನು ಕಟ್ಟಿಕೊಳ್ಳಿ, ನೀವು ನಂಬಿದ ದೇವರಿಗೆ ಕುಟುಂಬ ದೊಂದಿಗೆ ಸೇರಿ ಕೊಂಡು ನೆಮ್ಮದಿಯಾಗಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸಿ ನಮ್ಮ ಧರ್ಮ ಉಳಿಸಿಕೊಳ್ಳಿ , ಈ ಪೇಮೆಂಟ್ ಗಿರಾಕಿಗಳ ಹೊಡಿ ಬಡಿ, ಕೊಲ್ಲು ಎಂದು ಪ್ರೆರೇಪಿಸುವ ರಕ್ತ ರಂಜಿತ ಧರ್ಮ ನಮ್ಮದಾ ಹೇಳಿ? ಇಂತಹವರಿಂದ ಧರ್ಮ ಉಳಿಯುದಿಲ್ಲ, ಬದಲಾಗಿ ಇಲ್ಲಿ ಹಿಂದೂ ಯುವಕರು ಜೈಲಿನ ಕಗ್ಗತ್ತಲಲ್ಲಿ ಕೊಳೆಯುತ್ತಿದ್ದರೆ ಅಲ್ಲಿ ಸೂಲಿಬೆಲೆಯಂತಹ ಶಕುನಿಗಳು ಹವಾನಿಯಂತ್ರಿತ ಕೋಣೆಯಲ್ಲಿ ಮುಂದಿನ ಗಲಭೆಯ ಸ್ಕೆಚ್ ತಯಾರಿ ಯಲ್ಲಿರುತ್ತಾರೆ. ಯುವಕರೇ ಕೇಳಿ ಯಾವುದೋ ರಾಜಕೀಯ ಪಕ್ಷದ ಪುಡಾರಿಗಳಿಂದ ಇಂತಿಷ್ಟು ಸಂಬಳ ಎಂದು ಕಂಟ್ರಾಕ್ಟ್ ಪಡೆದು ಹಿಂದೂ ಯುವಕರ ದಾರಿ ತಪ್ಪಿಸುವವರಿಂದ ಜಾಗ್ರತರಾಗಿ, ವಿದ್ಯಾವಂತರಾಗಿ, ದೇಶ ವಿದೇಶ ಗಳಲ್ಲಿ ನಿಮ್ಮ ವಿದ್ಯಾವಂತಿಕೆ ಅನ್ನು ತೋರಿಸಿ, ಸುತ್ತ ಮುತ್ತ ಜನತೆ ಮತ್ತು ಕುಟುಂಬದೊಂದಿಗೆ ನೆಮ್ಮದಿಯೊಂದಿಗೆ ಜೀವನವನ್ನು ಹಂಚಿಕೊಂಡು ಜೀವನದ ಸಾರ್ಥಕತೆಯನ್ನು ಪಡೆದುಕೊಳ್ಳಿ.
ನಾವು ಹಿಂದೆ ಕೇಸರಿ ಭಾಗವಾಧ್ವಜವನ್ನು ಭಕ್ತಿ ಪೂರ್ವಕವಾಗಿ ನಾಗಮಂಡಲ, ಭಜನೆ, ತುಳಸಿ ಪೂಜೆ ಹೀಗೆ ಬೇರೆ ಬೇರೆ ಪವಿತ್ರ ಧಾರ್ಮಿಕ ಕಾರ್ಯಗಳಲ್ಲಿ ಆಳವಡಿಸಿ ಧನ್ಯರಾಗುತ್ತೀದ್ದೆವು, ಕೇಸರಿ ಎಂದರೆ ನಮ್ನಲ್ಲಿ ಪವಿತ್ರ ಭಾವನೆಯೊಂದು ತಾನೇ ತಾನಾಗಿ ಮೂಡುತ್ತಿತ್ತು. ಆದರೆ ಸೂಲಿಬೆಲೆ ಯಂತಹವರಿಂದ ಇವತ್ತು ಕೇಸರಿ ಧ್ವಜ ಎನ್ನುವುದು ರಾಜಕೀಯ ಕೆಸರಿನಲ್ಲಿ ಅಪವಿತ್ರ ಗೊಂಡಿದೆ. ನನ್ನ ಹಿಂದೂ ಸಹೋದರರೇ ಅತ್ಯಂತ ಪ್ರೀತಿಯಿಂದ ಅಷ್ಟೇ ವಿಷಾದ ದಿಂದ ಹೇಳುತ್ತೇನೆ ಕೇಳಿ, ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವೆಂಬ ಸಾವು ಹೊತ್ತೋಯ್ಯುವುದು ಪ್ರಕೃತಿಯ ನಿಯಮ. ಆದರೆ ಹೊತ್ತಲ್ಲದ ಹೊತ್ತಿನಲ್ಲಿ, ವಯಸ್ಸಲ್ಲದ ವಯಸ್ಸಿನಲ್ಲಿ ಸೂಲಿಬೆಲೆ ಯಂತಹ ಧರ್ಮ ಭಂಜಕರ ದುಷ್ಟ ಧರ್ಮ ಉನ್ಮಾದಕ್ಕೆ ಪರವಶರಾಗಿ ಬದುಕನ್ನು ಕಳೆದು ಕೊಳ್ಳದಿರಿ ಅಲ್ಲಿ ನಿಮ್ಮ ಮನೆಯ ಹೊಸ್ತಿಲಿನಲ್ಲಿ ನಿಮ್ಮವರು ನಿಮಗಾಗಿ ಕಾಯುತಲಿದ್ದಾರೆ…