ಡೈಲಿ ವಾರ್ತೆ: 12/ಮಾರ್ಚ್ /2025

ಕೋಟ| ಜನತಾ ಸಮೂಹ ಸಂಸ್ಥೆಯಲ್ಲಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಆಚರಣೆ.

ಜನತಾ ಸಮೂಹ ಸಂಸ್ಥೆಯ ಆವರಣದಲ್ಲಿ ಸುರಕ್ಷತಾ ವಾರದ ಅಂಗವಾಗಿ ಸಿಬ್ಬಂದಿಗಳಿಗೆ ಸುರಕ್ಷತಾ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ಆನಂದ ಸಿ ಕುಂದರ್ ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ “ಸಂಸ್ಥೆಯು ಕಾರ್ಮಿಕರ ಸುರಕ್ಷತೆಗಾಗಿ ಯಾವುದೇ ಉಪಕರಣ ಮತ್ತು ವ್ಯವಸ್ಥೆಯನ್ನು ಮಾಡಲು ಸಿದ್ದವಿದೆ ಆದರೆ ಕಾರ್ಮಿಕರು ಅದನ್ನು ತನ್ನ ಮೂಲಭೂತ ಕರ್ತವ್ಯವೆಂದು ಭಾವಿಸಿದಾಗ ಮಾತ್ರ 100% ಸುರಕ್ಷತೆಯು ಸಾದ್ಯ” ಎಂದರು.


ಕಾರ್ಯಕ್ರಮದಲ್ಲಿ ವಿವಿಧ ಸುರಕ್ಷತಾ ಚಟುವಟಿಕೆಗಳಲ್ಲಿನ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಶ್ರೀ ರಕ್ಷಿತ್ ಎ ಕುಂದರ್. ಸಂಸ್ಥೆಯ ಶ್ರೀನಿವಾಸ ಕುಂದರ್, ಡಾ! ಧಾನೇಶ್ ಜೀವಾನಿ, ಅಶ್ವತ್ ಜೆ ಶೆಟ್ಟಿ,ಮಿಥುನ್ ಕುಮಾರ್ ಉಪಸ್ಥಿತರಿದ್ದರು. ಸುರಕ್ಷತಾಧಿಕಾರಿ ಕಾರ್ತಿಕ್ ಆಚಾರ್ಯ ಕಾರ್ಯಕ್ರಮ ಸಂಘಟಿಸಿ, ರವಿಕಿರಣ್ ಕಾರ್ಯಕ್ರಮ ನಿರೂಪಿಸಿ,ಸಚಿನ್ ಸಹಕರಿಸಿದರು.