ಡೈಲಿ ವಾರ್ತೆ: 15/ಮಾರ್ಚ್ /2025

ತುಮ್ಮಿನಕಟ್ಟಿ ಗ್ರಾಮದಲ್ಲಿ ಸಂಭ್ರಮದ ಹೋಳಿ ಆಚರಣೆ

ರಾಣಿಬೆನ್ನೂರು| ಕಾಮನ ಹಬ್ಬದ ಅಂಗವಾಗಿ ತುಮ್ಮಿನಕಟ್ಟಿ ಗ್ರಾಮದ ಗಲ್ಲಿ ಓಣಿಗಳಲ್ಲಿ, ಯುವಜನರು ಆಡುತ್ತಾ ಬಣ್ಣಗಳನ್ನು ಪರಸ್ಪರ ಮುಖಕ್ಕೆ ಬಳಿಯುತ್ತಾ ಹ್ಯಾಪಿ ಹೋಳಿ ಎಂದು ಶುಭಾಶಯ ಕೋರಿದರು.

ಬಸ್ ಸ್ಟ್ಯಾಂಡ್ ಸರ್ಕಲ್ಲಿನಲ್ಲಿ ಡಿಜೆ ನೃತ್ಯ ಮತ್ತು ಭರ್ಜರಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ರಂಗರಂಗನ ಬಣ್ಣಹಚ್ಚಿ ಸಿಂಚನ ಕಂಡು ಬಂದಿತ್ತು.

ನಂತರ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ನಗರಕ್ಕೆ ಮಧ್ಯಾಹ್ನ 1.30 ರ ಸುಮಾರಿಗೆ ಕೆಂಡ ತಂದು ಎರಡು ಗಂಟೆಗೆ ಕಾಮದಹನ ಮಾಡಲಾಯಿತು. ಮತ್ತು ತಿಮ್ಮನಕಟ್ಟಿ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಯುವ ಮುಖಂಡರು ಬರಮಪ್ಪ ಗೋವಿನಹಾಳ, ಧರ್ಮರಾಜ್ ಕಡೆಮನಿ, ಬಸವರಾಜ ದೊಡ್ಡಮನಿ, ಪ್ರವೀಣ್ ಡಿ, ನಾಗರಾಜ ಕಡೇಮನಿ, ಬರಮಪ್ಪ ಪೂಜಾರ, ರಾಜು ಹಲಗಿ, ಗುಡ್ಡಪ್ಪ ಹಾಲಪ್ಪ, ಗೋನಾಳ್ ಮರಿಯಪ್ಪ, ಗೋನಾಳ್ ಪರಮೇಶಪ್ಪ, ಗೋನಾಳ ಇದು ಪೂಜಾರ, ವಸಂತ್ ಕೋಟೆಪ್ಪ ಪೂಜಾರ, ದುರುಗೇಶ್ ದೊಡ್ಮನಿ ಇದರು