ಡೈಲಿ ವಾರ್ತೆ: 15/ಮಾರ್ಚ್ /2025

ಕುಂದಾಪುರ| ಶ್ರವಣ ದೋಷ ಇರುವವರಿಗೆ ಮಾನ್ಯ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಂದ ಸಾಧನ ವಿತರಣೆ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಮಾರಿ ಪ್ರತೀಕ್ಷಾ ಇವರಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಶಾಸಕರ ನಿಧಿಯಿಂದ ಶ್ರವಣ ಸಾಧನವನ್ನು ಇಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಗುಣಮಟ್ಟದ ಶ್ರವಣ ಸಾಧನವನ್ನು ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ರತ್ನ ಸುವರ್ಣ ಯೋಜನಾ ಸಹಾಯಕರು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾಧಿಕಾರಿ ಶಿವಾಜಿ, ಮತ್ತು ಶ್ರವಣ ತಜ್ಞರು (DDRC) ಶ್ರೀಮತಿ ನೆಲೆಶ ಫಲಾನುಭವಿಗಳಾದ ಕುಮಾರಿ ಪ್ರತಿಕ್ಷ ಉಪಸ್ಥಿತರಿದ್ದರು.