ಡೈಲಿ ವಾರ್ತೆ: 15/ಮಾರ್ಚ್ /2025

ಸಂತೆಕಟ್ಟೆ ಪ್ರೌಢಶಾಲೆಗೆ ಫ್ಯಾನ್‌ ಹಸ್ತಾಂತರ: ಸರ್ಕಾರಿ ಶಾಲೆಗಳ ಉಳಿವಿಗೆ ದಾನಿಗಳ ಸಹಕಾರ ಅಗತ್ಯ – ರೊನಾಲ್ಡ್‌ ಡಿಸೋಜಾ

ಉಡುಪಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಸಹಕಾರ ಅಗತ್ಯ ಎಂದು ಮಣಿಪಾಲ ಟೆಕ್ನಾಲಜಿಸ್‌ನ ಜನರಲ್‌ಮ್ಯಾನೇಜರ್‌ ರೊನಾಲ್ಡ್‌ ಡಿಸೋಜಾ ಹೇಳಿದರು.

ಅವರು ಬ್ರಹ್ಮಾವರ ವಲಯದ ಸಂತೆಕಟ್ಟೆ ಅರ್ಬೆಟ್ಟು ವಾಮನ ಕಾಮತ್‌ ಫೌಂಡೇಶನ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲೆಗೆ ಮಣಿಪಾಲ ಟೆಕ್ನಾಲಜಿಸ್‌ ವತಿಯಿಂದ ಕೊಡಮಾಡಿದ 10 ಸೀಲಿಂಗ್‌ಫ್ಯಾನ್‌ಗಳನ್ನು ಮುಖ್ಯ ಶಿಕ್ಷಕಿ ಸಂಧ್ಯಾ ಪ್ರಭು ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಕಳ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಉಷಾ ಇದ್ದರು.

ಮುಖ್ಯ ಶಿಕ್ಷಕಿ ಸಂಧ್ಯಾ ಪ್ರಭು ಸ್ವಾಗತಿಸಿದರು. ಅಧ್ಯಾಪಕ ಪ್ರಶಾಂತ ಶೆಟ್ಟಿ ವಂದಿಸಿದರು. ಅಧ್ಯಾಪಕಿ ಪ್ರಭಾ ಕಾರ್ಯಕ್ರಮ ನಿರೂಪಿಸಿದರು.