ಡೈಲಿ ವಾರ್ತೆ: 16/ಮಾರ್ಚ್ /2025

ಬ್ರಹ್ಮಾವರ| ಎಸ್. ಎಂ. ಎಸ್ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನೆ ಕಾರ್ಯಕ್ರಮ

ರಾಷ್ಟೀಯ ಸೇವಾ ಯೋಜನೆ ಎಸ್.ಮ್.ಎಸ್ ಕಾಲೇಜು ಬ್ರಹ್ಮಾವರ ಇದರ ಸಮಾರೋಪ ಸಮಾರಂಭವು ದಿನಾಂಕ 16-02-2025 ರಂದು ವಿಶ್ವ ಜ್ಞಾನ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗೆಸ್ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುರೇಶ ಶೆಟ್ಟಿ ತಡಾಲು ಇವರು ಕ್ಯಾಂಪಿನ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು ಎಂದು ಹೇಳಿದರು.

ಶ್ರೀ ವಾಣಿ ಪ್ರೌಢ ಶಾಲೆ ನಡೂರ್ ಇದರ ನಿವೃತ್ತ ಮುಖ್ಯೋಪಾಧ್ಯಾರಾದ ಶ್ರೀ ವಿಶ್ವನಾಥ ಶೆಟ್ಟಿ ಇವರು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು .ಹಳೆ ವಿದ್ಯಾರ್ಥಿ ಸಂಘ ,ಎಸ್. ಮ್ .ಎಸ್ ಕಾಲೇಜು ಬ್ರಹ್ಮಾವರ ಇದರ ಅಧ್ಯಕ್ಷರಾದ prof ಸಖಾರಾಮ ಸೋಮಯಾಜಿ ,ವಿಶ್ವಜ್ಞಾನ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ನಿವೃತ್ತ ಮುಖ್ಯೋಪಾಧ್ಯಾರಾದ ಶ್ರೀ ಸದಾಶಿವ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘ ಎಸ್ ಮ್ ಎಸ್ ಕಾಲೇಜು ಬ್ರಹ್ಮಾವರ ಇದರ ಕಾರ್ಯದರ್ಶಿಯಾದ ಶ್ರೀ ಸಚಿನ್ ಪೂಜಾರಿ ,ವಿಶ್ವಜ್ಞಾನ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಸುದೀರ್ ಶೆಟ್ಟಿ , ಮಂದಾರ್ತಿ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀ ಹ್ ಉದಯ್ ಭಾಸ್ಕರ್ ಶೆಟ್ಟಿ ಇವರು ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ಶ್ರೀ ಪ್ರಸನ್ನ ಶೆಟ್ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಜನಾಧಿಕಾರಿಗಳಾದ ಶ್ರೀ ಪ್ರಕಾಶ್ ಇವರು ವಂದನಾರ್ಪಣೆ ಗೈದರು.
ಕಾರ್ಯಕ್ರಮವನ್ನು ತೃಷಾ ಇವರು ನಿರೂಪಿಸಿದರು.