


ಡೈಲಿ ವಾರ್ತೆ: 16/ಮಾರ್ಚ್ /2025


ಕನ್ನಾರು ಹತ್ತರಕಟ್ಟೆ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಕೊಡುಗೆ

ಬ್ರಹ್ಮಾವರ: ಶ್ರೀ ಕೇತ್ರ ಧರ್ಮಸ್ಥಳದ ವತಿಯಿಂದ ಹಲವಾರು ದೈವ ದೇವರುಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಧನ ಸಹಾಯ ನೀಡುತ್ತಿದ್ದು, ಕೃಷಿ, ಆರೋಗ್ಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೂ ಡಾ.ವೀರೇಂದ್ರ ಹೆಗ್ಗಡೆ ಅವರು ಉತ್ತೇಜನ ನೀಡುತ್ತಿದ್ದಾರೆ ಎಂದು ಹೆಬ್ರಿ ತಾಲ್ಲೂಕು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಲೀಲಾವತಿ ಹೇಳಿದರು.
ಚೇರ್ಕಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಾರು ಮಹಮ್ಮಾಯಿ ತುಳಜಾ ಭವಾನಿ ಹತ್ತರಕಟ್ಟೆಯ ಜೀರ್ಣೋದ್ಧಾರಕ್ಕೆ ಕ್ಷೇತ್ರದ ವತಿಯಿಂದ ರೂ.1.5ಲಕ್ಷದ ಆರ್ಥಿಕ ಧನ ಸಹಾಯದ ಚೆಕ್‌ಹಸ್ತಾಂತರಿಸಿ ಅವರು ಮಾತನಾಡಿದರು.
ಯೋಜನೆಯ ಸೇವಾ ಪ್ರತಿನಿಧಿ ಆಶಲತಾ, ವಿದ್ಯಾ, ಕನ್ನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೆಂಕಟೇಶ ಮಂಜ, ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ನಾಯ್ಕ, ಹತ್ತರಕಟ್ಟೆಯ ಪ್ರಮುಖರಾದ ಮಹಾಲಿಂಗ ನಾಯ್ಕ, ನಾಗಪ್ಪ ನಾಯ್ಕ, ವಿಠಲ ನಾಯ್ಕ, ಶಂಕರ ನಾಯ್ಕ, ಪ್ರಶಾಂತ ನಾಯ್ಕ, ಜಯ ನಾಯ್ಕ, ಸಂಪತ್‌ನಾಯ್ಕ ಮತ್ತು ಹತ್ತರಕಟ್ಟೆಯ ಸಮಸ್ತರು ಇದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಕಮಲಾಕ್ಷ ಹೆಬ್ಬಾರ ಕನ್ನಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಹರೀಶ ಶೆಟ್ಟಿ ಚೇರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.