


ಡೈಲಿ ವಾರ್ತೆ: 17/ಮಾರ್ಚ್ /2025


ಮೆಂತ್ಯೆ ಸೊಪ್ಪು ಆರೋಗ್ಯಕ್ಕೆ ಪ್ರಯೋಜನಗಳು, ಇಲ್ಲಿದೆ ಮಾಹಿತಿ

ಮೆಂತೆ ಎಲೆಯನ್ನು ರುಬ್ಬಿ, ಒಂದು ಗ್ಲಾಸ್ ರಸವನ್ನು ತಯಾರಿಸಿ ಕುಡಿದರೆ ಇನ್ಸುಲಿನ್ ಹಾರ್ಮೋನ್‍ಗಳ ಮಟ್ಟವನ್ನು ನಿಯಂತ್ರಿಸಬಹುದು. ಆರೋಗ್ಯ ಪೂರ್ಣ ಪಾನೀಯವಾದ ಇದರಲ್ಲಿ ಕಹಿ ಗುಣವು ಇರುವುದರಿಂದ ಮಧುಮೇಹಕ್ಕೂ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವುದು
ಮೆಂತ್ಯ ಸೊಪ್ಪು ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರಗಳಿಂದ ಮಕ್ಕಳು ದೂರವಿರುವುದು ಸಾಮಾನ್ಯವಾಗಿ ಹೋಗಿದೆ. ನಗರದ ಬಿಝಿ ಲೈಫ್ ನಲ್ಲಿ ತೊಡಗಿಕೊಳ್ಳುತ್ತಿರುವ ಪೋಷಕರು ಮಕ್ಕಳಿಗೆ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಕೊಡುತ್ತಿರುವುದೇ ವಿರಳವಾಗಿ ಹೋಗಿದೆ. ಆರೋಗ್ಯದ ಕಡೆ ಗಮನ ಕೊಡುವ ಜನರ ಸಂಖ್ಯೆಯಂತೂ ವಿರಳವಾಗಿ ಹೋಗುತ್ತಿದೆ. ತರಕಾರಿ, ಹಸಿರುವ ಸೊಪ್ಪುಗಳ ಮಹತ್ವವನ್ನೇ ಜನರು ಮರೆತು ಹೋಗುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಜನರು ಜೀವನ ಸಾಗಿಸಲು ಆರಂಭಿಸಿದ್ದಾರೆ. ಪ್ರತೀ ಕಾಯಿಲೆ, ಸಮಸ್ಯೆಗಳಿಗೂ ವೈದ್ಯರ ಮೊರೆ ಹೋಗುವುದು ಸಾಮಾನ್ಯವಾಗಿ ಹೋಗಿದೆ.
ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹು ಮುಖ್ಯವಾಗಿದ್ದು, ಇವುಗಳ ಪ್ರಾಮುಖ್ಯತೆಗಳನ್ನು ಪೋಷಕರು ತಿಳಿದುಕೊಂಡು, ಅದನ್ನು ಮಕ್ಕಳಿಗೂ ಹೇಳಿಕೊಡುವ ಮನೋಭಾನೆಯನ್ನು ಬೆಳೆಸಿಕೊಳ್ಳಬೇಕು. ಅದ್ರಲ್ಲೂ ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಿಕೊಂಡರೆ ಆರೋಗ್ಯದ ಸಮಸ್ಯೆಗಳನ್ನು ನಾವು ಅರ್ಧಭಾಗದಷ್ಟು ಪರಿಹರಿಸಬಹುದೆಂದು ಮತ್ತೆ ಮತ್ತೆ ಕೇಳುತ್ತಾ ಮತ್ತು ಓದುತ್ತಾ ಇರುತ್ತೇವೆ.. ಹೀಗಾಗಿ ಈ ಬಾರಿ ಮೆಂತೆ ಸೊಪ್ಪಿನಿಂದ ಸಿಗುವ ಪ್ರಯೋಜನ ಏನು ಎನ್ನುವುದನ್ನು ನೋಡೋಣ

1)ತಾಯಿಯಲ್ಲಿ ಎದೆಹಾಲು ಉತ್ಪಾದನೆ: ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು. ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ ಚಾದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.
2)ಉರಿಯೂತ ಕಡಿಮೆ ಮಾಡಲು: ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿರುವ ಮೆಂತ್ಯೆಯು ದೀರ್ಘಕಾಲಿನ ಕೆಮ್ಮು, ಬೊಕ್ಕೆ, ಬ್ರಾಂಕ್ರೈಟಿಸ್ ಮತ್ತು ಇತರ ಹಲವಾರು ಚರ್ಮದ ಸಮಸ್ಯೆ ನಿವಾರಣೆ ಮಾಡುವುದು. ಬೊಕ್ಕೆ, ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.
3)ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಳ: ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ರಕ್ತ ಹೀನತೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.
4)ಮಲಬದ್ದತೆ ಸಮಸ್ಯೆ ನಿವಾರಣೆ: ಮೆಂತೆ ಎಲೆಯು ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ.
5)ಪುರುಷರ ಲೈಂಗಿಕತೆ ಹೆಚ್ಚಿಸಲು: ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ.
6)ಹಾರ್ಮೋನ್‍ಗಳ ಮಟ್ಟವನ್ನು ನಿಯಂತ್ರಣ: ಮೆಂತೆ ಎಲೆಯನ್ನು ರುಬ್ಬಿ, ಒಂದು ಗ್ಲಾಸ್ ರಸವನ್ನು ತಯಾರಿಸಿ ಕುಡಿದರೆ ಇನ್ಸುಲಿನ್ ಹಾರ್ಮೋನ್‍ಗಳ ಮಟ್ಟವನ್ನು ನಿಯಂತ್ರಿಸಬಹುದು. ಆರೋಗ್ಯ ಪೂರ್ಣ ಪಾನೀಯವಾದ ಇದರಲ್ಲಿ ಕಹಿ ಗುಣವು ಇರುವುದರಿಂದ ಮಧುಮೇಹಕ್ಕೂ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವುದು
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.