ಡೈಲಿ ವಾರ್ತೆ: 17/ಮಾರ್ಚ್ /2025

ಮರವಂತೆ| ಪಿಕ್‌ಅಪ್ ವಾಹನ ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು

ಕುಂದಾಪುರ: ಪಿಕ್‌ಅಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಗ್ರಾಮದ ಸೀ ಲ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಹತ್ತಿರದ ಭಾನುವಾರ ನಡೆದಿದೆ.

ಮೃತರನ್ನು ಯಳಜಿತ್ ಗ್ರಾಮದ ಬಾಬು ಎಂಬವರ ಪತ್ನಿ ಲಕ್ಷ್ಮೀ(45) ಎಂದು ಗುರುತಿಸಲಾಗಿದೆ.

ಕುಂದಾಪುರ-ಬೈಂದೂರು ಕಡೆಯ ಏಕಮುಖ ರಸ್ತೆಯಲ್ಲಿ ಪಿಕ್ ಅಪ್ ವಾಹನ ಅತೀ ವೇಗದಿಂದ ಬಂದು ಲಕ್ಷ್ಮೀ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.