ಡೈಲಿ ವಾರ್ತೆ: 17/ಮಾರ್ಚ್ /2025

ಓಂ ಸ್ಟಾರ್ ಫ್ರೆಂಡ್ಸ್ (ರಿ)ಕೋಟ ಗೊಬ್ಬರಬೆಟ್ಟು, ಇವರ 25 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮಗಳ ಪೋಸ್ಟರ್ ಅನಾವರಣ

ಕೋಟ| ಓಂ ಸ್ಟಾರ್ ಫ್ರೆಂಡ್ಸ್ (ರಿ)ಕೋಟ ಗೊಬ್ಬರಬೆಟ್ಟು, ಇವರ 25 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ವಿವರದ ಪೋಸ್ಟರ್ ಅನ್ನು ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹಾಗೂ ಪ್ರಸಿದ್ಧ ಮಸ್ಸೊದ್ಯಮಿ, ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಧರ್ಮದರ್ಶಿ ಆನಂದ್ ಸಿ ಕುಂದರ್ ಅವರ ಅಮೃತ ಹಸ್ತದಿಂದ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮನಸೂರೆ ಗೊಳಿಸುವ ನೃತ್ಯ, ಸಂಗೀತ ಹಾಗೂ ಯಕ್ಷ ನಕ್ಷತ್ರ (ರಿ ) ಕಿರಾಡಿ ಹಾಗೂ ಬಡಗುತಿಟ್ಟಿನ ಅಪ್ರತಿಮ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ” ವೀರ ಚಂದ್ರಹಾಸ” ಎಂಬ ಪೌರಾಣಿಕ ಕಥೆಯನ್ನು ಆಡಿ ತೋರಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಿಸಿದ್ದಾರೆ.