ಡೈಲಿ ವಾರ್ತೆ: 17/ಮಾರ್ಚ್ /2025

ಕೋಟತಟ್ಟು ಗ್ರಾ. ಪಂ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರು ಶೇಕಡಕ್ಕೂ ಗುರಿ ಮೀರಿ ಸಾಧನೆ

ಕೋಟ| ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟತಟ್ಟು ಗ್ರಾಮ ಪಂಚಾಯತಿ ವತಿಯಿಂದ 2024- 25 ನೇ ಸಾಲಿನಲ್ಲಿ ನಿಗದಿತ ಗುರಿ 4011 ಮಾನವ ದಿನ ಸೃಜನೆಗೆ ಎದುರಾಗಿ ಈ ದಿನದವರೆಗೆ 4,982 ಮಾನವ ದಿನಗಳನ್ನು ಸೃಜಿಸಿ ಶೇಕಡ 124 ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಪಂಚಾಯತಿ ವತಿಯಿಂದ ನಡೆದ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಸಾಧನೆಗೆ ಕಾರಣರಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮಸ್ಥರ ಪರವಾಗಿ ಕೋಟತಟ್ಟು ಗ್ರಾಮ ಪಂಚಾಯಿತಿಯ ಈ ವಿಶೇಷ ಸಾಧನೆಗೆ ಅಭಿನಂದನೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಪ್ರತೀಕ್ ಬಾಯಲ್ ಇವರಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ರವೀಂದ್ರ ರಾವ್ ಸ್ವೀಕರಿಸಿದರು.

ವೈಯಕ್ತಿಕ ಕಾಮಗಾರಿ ಹಾಗೂ ಸಮುದಾಯದ ಕಾಮಗಾರಿಯಲ್ಲಿ ಈ ಹಿಂದಿನ ಆರ್ಥಿಕ ವರ್ಷಗಳಿಗಿಂತ ಗರಿಷ್ಠ 17 ಲಕ್ಷ ಕೂಲಿ ಹಾಗೂ ಆರು ಲಕ್ಷ ಸಾಮಗ್ರಿ ಒಟ್ಟಾರೆ 23 ಲಕ್ಷಕ್ಕೂ ಅಧಿಕ ಮೊತ್ತ ಜನರ ಖಾತೆಗೆ ನೇರವಾಗಿ ತಲುಪಿಸಿ ಆಸ್ತಿಗಳ ಸೃಜನೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.