


ಡೈಲಿ ವಾರ್ತೆ: 19/ಮಾರ್ಚ್ /2025


ಕರ್ಬೂಜ ಹಣ್ಣಿನ ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನ ಗಳು

ಬೇಸಿಗೆಯಲ್ಲಿ ಕರ್ಬೂಜ ಹಣ್ಣಿನ ಸೇವನೆಯಿಂದ ದೇಹಕ್ಕೆ ತಂಪು ಸಿಗುತ್ತದೆ, ಜೊತೆಗೆ ಚೈತನ್ಯ ಹೆಚ್ಚಲು ಇದು ಸಹಕಾರಿ. ಇದರೊಂದಿಗೆ ಚರ್ಮದ ಆರೋಗ್ಯದಿಂದ ಮಲಬದ್ಧತೆ ನಿವಾರಣೆವರೆಗೆ ಇದರಲ್ಲಿದೆ ಹಲವು ರೀತಿಯ ಪ್ರಯೋಜನ.
ಬೇಸಿಗೆಯಲ್ಲಿ ನೀರಿನಾಂಶ ಹೆಚ್ಚಿರುವ ಹಣ್ಣುಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಹಾಗಾಗಿ ಕಿತ್ತಳೆ, ಕಲ್ಲಂಗಡಿ, ಕರ್ಬೂಜ, ಮೂಸಂಬಿ, ಕಿವಿಯಂತಹ ಹಣ್ಣುಗಳ ಸೇವನೆಗೆ ಪ್ರಾಮುಖ್ಯ ನೀಡಬೇಕು ಎನ್ನುತ್ತಾರೆ. ಇವುಗಳ ಸೇವನೆಯಿಂದ ದೇಹದ ತಾಪ ತಣಿಯುವುದು ಮಾತ್ರವಲ್ಲ, ಹಲವು ರೀತಿಯ ಆರೋಗ್ಯ ಪ್ರಯೋಜನಗಳೂ ಇವೆ.
ಅದರಲ್ಲೂ ಬೇಸಿಗೆಯಲ್ಲಿ ಕರ್ಬೂಜ ಹಣ್ಣಿನ ಸೇವನೆಯಿಂದ ದೈಹಿಕ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯಕ್ಕೂ ಉತ್ತಮ. ಇದು ಬೇಸಿಗೆಯಲ್ಲಿ ದೇಹಕ್ಕೆ ಚೈತನ್ಯ ನೀಡುತ್ತದೆ. ಪೋಷಕಾಂಶಗಳ ಆಗರವಾಗಿರುವ ಕರ್ಬೂಜದಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳಿವೆ ನೋಡಿ.

ದೇಹದ ಶಕ್ತಿ ಹೆಚ್ಚಿಸುತ್ತೆ:
ಕರ್ಬೂಜ ಹಣ್ಣು ತಂಪು ಗುಣವನ್ನು ಹೊಂದಿದೆ. ಇದಕ್ಕೆ ಪಿತ್ತ ಮತ್ತು ವಾತವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇವಿಷ್ಟು ಮಾತ್ರವಲ್ಲ, ದೇಹದ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥವನ್ನು ಈ ಹಣ್ಣು ಹೊಂದಿದೆ.
ಕರುಳನ್ನು ಸ್ವಚ್ಛ ಮಾಡುತ್ತೆ:
ಕರ್ಬೂಜ ಮೂತ್ರವನ್ನು ಹೆಚ್ಚಿಸುವ ಗುಣದ ಜೊತೆಗೆ, ಮೂತ್ರ ಕೋಶದಲ್ಲಿ ಕಾಣಿಸುವ ಕಲ್ಲನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ. ಮತ್ತೊಂದು ವಿಚಾರವೆಂದರೆ ಇದು ಕರುಳನ್ನು ಸಹ ಸ್ವಚ್ಛ ಮಾಡುತ್ತದೆ.
ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ:
ಮಲ ವಿಸರ್ಜನೆಗೂ ಇದು ಸಹಕಾರಿಯಾಗಿ. ಕರ್ಬೂಜ ಹಣ್ಣಿನಲ್ಲಿ ನಾನಾ ಗುಣವಿದ್ದು, ಕೆಲವರಿಗೆ ಮಲ ವಿಸರ್ಜನೆಯಾಗಲು ವೈದ್ಯರು ಈ ಹಣ್ಣನ್ನು ಸೇವಿಸಲು ಹೇಳುತ್ತಾರೆ. ಇದಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ.
ರಕ್ತದೊತ್ತಡ ನಿಯಂತ್ರಿಸುತ್ತೆ:
ಹೃದಯ ಸಂಬಂಧ ಕಾಯಿಲೆಯನ್ನು ನಿಯಂತ್ರಿಸುವ ಗುಣ, ಅಧಿಕ ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಹಾಗೂ ಉರಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಕರ್ಬೂಜ ಜ್ಯೂಸ್ ಮಾಡಿ ಸೇವಿಸಿದರೆ ಉತ್ತಮ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.