ಡೈಲಿ ವಾರ್ತೆ: 19/ಮಾರ್ಚ್ /2025

ನೀರಿನ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳು ಮೃತ್ಯು!

ಕಲಬುರಗಿ: ನೀರಿನ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳು ಸಾವಿಗೀಡಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕೋಳಕೂರ ಗ್ರಾಮದಲ್ಲಿ ನಡೆದಿದೆ.

ಗಿರೀಶ್ (3) ಮತ್ತು ಶ್ರೇಷ್ಠಾ (2) ಮೃತ ಮಕ್ಕಳು. ಆಟವಾಡುತ್ತಿದ್ದಾಗ ಇಬ್ಬರೂ ಮಕ್ಕಳು ಕಣ್ಮರೆಯಾಗಿದ್ದರು. ಈ ವೇಳೆ ಮನೆ ಹತ್ತಿರವಿರುವ ನೀರಿನ ಸಂಪ್‌ನಲ್ಲಿ ಮಕ್ಕಳ ಶವ ಪತ್ತೆಯಾಗಿದೆ.
ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.