


ಡೈಲಿ ವಾರ್ತೆ: 20/ಮಾರ್ಚ್ /2025


ಬೊಳ್ಳೂರು ಮದರಸಕ್ಕೆ ಶೇ.100 ಫಲಿತಾಂಶ, ಇಬ್ಬರು ವಿದ್ಯಾರ್ಥಿನಿಯರು ಟಾಪ್ ಪ್ಲಸ್

ವರದಿ: ಅದ್ದಿ ಬೊಳ್ಳೂರು
ಹಳೆಯಂಗಡಿ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬೊಳ್ಳೂರು ದಾರುಲ್ ಉಲೂಂ ಮದ್ರಸದ , ವಿದ್ಯಾರ್ಥಿನಿಯರಾದ ಅಲೀಮ ಸಜ್ನಾ ಪ್ರಥಮ ಹಾಗು ಸೊಹಿಬತುಲ್ ಅಸ್ಲಾಮಿಯ ದ್ವಿತೀಯ ಸ್ಥಾನ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇಲ್ಲಿನ ಇಮ್ರಾನ್ ಮತ್ತು ಶಮ್ರಿನಾ ದಂಪತಿಯ ಪುತ್ರಿಯಾದ ಅಲೀಮ ಸಜ್ನಾ 361 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಹಾಗೂ ದಾವೂದ್ ಹುಸೈನ್ ಮತ್ತು ರೆಹಮತ್ ದಂಪತಿಯ ಪುತ್ರಿ ಸೊಹಿಬತುಲ್ ಅಸ್ಲಾಮಿಯ 358 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.