


ಡೈಲಿ ವಾರ್ತೆ: 20/ಮಾರ್ಚ್ /2025


ಮಾ. 23 ರಂದು “ಸಂತೋಷ್ ಹಿಲಿಯಾಣ”ರಿಗೆ ಅಭಿಮಾನಿ ಬಳಗದವರು ಕೊಡಮಾಡುವ “ರಜತಾಭಿನಂದನೆ”

ಬ್ರಹ್ಮಾವರ: ಯಕ್ಷಗಾನ ರಂಗದಲಿ 25 ವರ್ಷಗಳ ತಿರುಗಾಟ ಪೂರೖಸಿದ ಹನುಮಗಿರಿ ಮೇಳದ ಪ್ರದಾನ ಸ್ತ್ರೀವೇಷದಾರಿ ಸಂತೋಷ್ ಹಿಲಿಯಾಣರಿಗೆ ಇದೇ ತಿಂಗಳ 23-03-2025ನೇ ಆದಿತ್ಯವಾರ, ಮಂದಾರ್ತಿಯ ಶೇಡಿಕೊಡ್ಲು “ಶ್ರೀ ದುರ್ಗಾ ಸನ್ನಿಧಿ”ಯ ಸಭಾಭವನದ ವೇದಿಕೆಯಲ್ಲಿ ಬಡಗು ಹಾಗೂ ತೆಂಕುತಿಟ್ಟಿನ ತಮ್ಮ ಅಪಾರ ಅಭಿಮಾನಿ ಬಳಗ “ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ” ದಲಿ ಕೊಡಮಾಡುವ “ರಜತಾಭಿನಂದನೆ” ಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ತಮ್ಮ ಯಕ್ಷ ಪಯಣದುದ್ದಕ್ಕೂ ಸಹಕರಿಸಿ, ಹರಸಿದ ಹಿರಿಯರಿಗೆ “ರಜತ ಗುರು ಗೌರವ” ಹಾಗೂ ತಮ್ಮೊಂದಿಗೆ ಇವಿಷ್ಟೂ ಕಾಲ ದೃಡವಾಗಿ ಆಧಾರ ಸ್ತಂಭದಂತೆ ಜೊತೆಗಿದ್ದು ಪ್ರೊತ್ಸಾಹಿಸಿದವರಿಗೆ “ರಜತ ಸ್ತಂಭ ಗೌರವ” ವನ್ನು ನೀಡಿ ಗೌರವಿಸಲಿದ್ದಾರೆ ಎಂದು ಹಿಲಿಯಾನ ಬೆಳ್ಳಿಯಾನ ಅಭಿನಂದನಾ ಸಮಿತಿಯ ಸದಸ್ಯರಾದ ರಾಘವೇಂದ್ರ ರಾಜ್ ಸಾಸ್ತಾನ ಇವರು ತಿಳಿಸಿದರು. ಅವರು ಮಾ. 20 ರಂದು ಬ್ರಹ್ಮಾವರ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕಾರ್ಯಕ್ರಮದಲಿ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನವನ್ನು ಶ್ರೀಮದೆಡನೀರು ಮಠಾದೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಕರ್ನಾಟಕ ಸರ್ಕಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ
ಡಾ| ಟಿ. ಶ್ಯಾಮ್ ಭಟ್ ರವರು ವಹಿಸಿಕೊಂಡು, ಅದೇ ವೇದಿಕೆಯಲಿ “ರಜತಾಶ್ರಿತ ಪೋಷಕ ಗೌರವ” ವನ್ನು ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ರವರು ಮಾಡಲಿದ್ದು, ಶ್ರೀ ಸಂತೋಷ್ ಹಿಲಿಯಾಣ ತಮ್ಮ ಮಡದಿ ಶ್ರೀಮತಿ ವಿದ್ಯಾರೊಂದಿಗೆ “ರಜತಾಭಿನಂದನೆ” ಯನ್ನು ಜೊತೆಗೆ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಇವರಿಂದ “ರಜತ ನೂಪುರ”ವನ್ನು ಪಡೆಯಲಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಯಕ್ಷ ಪಯಣದಲಿ ಸಹಕರಿಸಿ, ಹರಸಿದ ತಂತ್ರಾಡಿ ಮಕ್ಕಳ ಯಕ್ಷಗಾನ ಮೇಳದ ವ್ಯವಸ್ಥಾಪಕರು ಹಾಗೂ ನಿರ್ದೇಶಕರಾದ ಟಿ. ಹಿರಿಯಣ್ಣ ಶೆಟ್ಟಿಗಾರ್ ಮಂದಾರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಮ್ ಕೆ. ರಮೇಶ ಆಚಾರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಮ್. ಎ. ನಾಯ್ಕ, ಮಂದಾರ್ತಿ ಮೇಳದ ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಕಡಬ ಪೂವಪ್ಪ, ಇವರುಗಳಿಗೆ “ರಜತ ಗುರು ಗೌರವ” ವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರ ಶಾಸಕ
ಕಿರಣ್ ಕುಮಾರ್ ಕೊಡ್ಗಿ ಹಾಗೂ ಗೀತಾನಂದ ಫೌಂಡೇಶನ್(ರಿ)ಪ್ರರ್ತಕರಾದ ಆನಂದ್ ಸಿ. ಕುಂದರ್ ಕೋಟ ರವರು ಪ್ರದಾನ ಮಾಡಲಿದ್ದಾರೆ
ಹಾಗೆಯೇ
“ರಜತ ಸ್ತಂಭ ಗೌರವ” ವನ್ನು, ಉಜಿರೆ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕರು ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ದಿವಾಕರ ಕಾರಂತ, ಎಡಪದವು,
ಅಶೋಕ್ ಭಟ್ ಉಜಿರೆ, ಶ್ರೀ ಕ್ಷೇತ್ರ ಕಳವಾಡಿ ಮೇಳದ ಯಜಮಾನರಾದ ಗುಂಡು ಕಾಂಚನ್ ಕೋಟ, ಹನುಮಗಿರಿ ಮೇಳದ ಪ್ರಬಂಧಕರು ಹರೀಶ್ ಬಳಂತಿಮುಗುರು, ಇವರುಗಳಿಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿ ಇದರ ಅನುವಂಶಿಕ ಮೊತ್ತೇಸರರಾದ
ಎಚ್. ಧನಂಜಯ ಶೆಟ್ಟಿ, ಹಾಗೂ ಕಲಾಪೋಷಕರು, ಶೇಡಿಕೊಡ್ಲು ಮಂದಾರ್ತಿಯ ವಿಠಲ್ ಶೆಟ್ಟಿ ಪ್ರಾಧಾನಿಸಲಿದ್ದಾರೆ,
ಸಭಾ ಕಾರ್ಯಕ್ರಮದ ಪ್ರಧಾನ ಅಭ್ಯಾಗತರಾಗಿ ತಲ್ಲೂರು ಶಿವರಾಮ ಶೆಟ್ಟ, ಗಣೇಶ್ ಕಿಣಿ ಬೆಳ್ವೆ, ತಾರನಾಥ ಶೆಟ್ಟಿ, ಕುರುಣಾಕರ ಶೆಟ್ಟಿ, ಆರ್ ಕೆ ಭಟ್ ಬೆಳ್ಳಾರೆ, ಶ್ರೀಮತಿ ಶ್ಯಾಮಲ ಎಸ್.ಕುಂದರ್, ಪ್ರತಾಪ್ ಭಂಡಾರಿ, ಸುಗ್ಗಿ ಸುಧಾಕರ ಶೆಟ್ಟಿ, ಬಾರಾಳಿ ವಿಜಯನಾಥ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಭಾಕರ ಡಿ. ಸುವರ್ಣ ಕರ್ನಿರೆ, ಉಮೇಶ್ ಕುಂದರ್ ಮಂದಾರ್ತಿ, ಜಯಂತ್ ಅಮೀನ್, ಪ್ರಮೋದ್ ಹೆಗ್ಡೆ, ಪ್ರವೀಣ್ ಗಡಿಯಾರ್ ಉಪಸ್ಥಿತರಿರಲಿದ್ದಾರೆ..
ಪ್ರಕಾಶ್ ಕಿರಾಡಿ ಕಾರ್ಯಕ್ರಮಕೆ ಸ್ವಾಗತ ಕೋರಲಿದ್ದಾರೆ, ಪ್ರಾಸ್ತಾವಿಕ ನುಡಿ & ಅಭಿನಂದನೆಯನ್ನು ಶ್ರೀ ವಾಸುದೇವ ರಂಗಾಭಟ್ ನೆರೆವೇರಿಸಿ, ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಎಸ್. ಆರ್. ದಾಮೋದರ ಕರ್ಮಾ ನಿರ್ವಹಿಸಲಿದ್ದಾರೆ, ರಾಘವೇಂದ್ರ ರಾಜ್ ಸಾಸ್ತಾನ, ಧನ್ಯವಾದ ಹೇಳಲಿದ್ದಾರೆ.
ಕಾರ್ಯಕ್ರಮಗಳ ವಿವರ..
ಮಧ್ಯಾಹ್ನ 2.00 ರಿಂದ
ಬಡಗಿನ ಸುಪ್ರಸಿದ್ಧ ಕಲಾವಿದರಿಂದ
ಯಕ್ಷಗಾನ ಪ್ರದರ್ಶನ “ರತ್ನಾವತಿ ಕಲ್ಯಾಣ
ಸಂಜೆ 5.00 ರಿಂದ :
ಮೆರವಣಿಗೆ ಪೂಜ್ಯ ಶ್ರೀಪಾದರು, ಅಧ್ಯಕ್ಷರು, ಅಭ್ಯಾಗತರು, ರಜತಾಭಿನಂದನೆ ಸ್ವೀಕರಿಸುವ ಶ್ರೀ ಸಂತೋಷ ಹಿಲಿಯಾಣ ಇವರನ್ನು ಶ್ರೀ ಮಂದರತಿ ಅಮ್ಮನವರ ಸನ್ನಿಧಿಯಿಂದ ಅಭಿನಂದನ ವೇದಿಕೆಗೆ ಕರೆ ತರಲಾಗುವುದು
ಸಂಜೆ 5.30 ರಿಂದ :
ರಜತಾಭಿನಂದನೆ ಸಮಾರಂಭ ಪ್ರಾರಂಭ
7.45 ರಿಂದ :
ತೆಂಕುತಿಟ್ಟು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಪ್ರದರ್ಶನ – “ಸಾಕೇತ ಸಾಮ್ರಾಜ್ಞಿ”
ಅದೇ ವೇದಿಕೆಯಲ್ಲಿ ಎಲ್ಲಾ ಸಹ ಕಲಾವಿದರಿಗೆ “ರಜತ ಸ್ಮರಣೆ” ಗೌರವವಿರುತ್ತದೆ ಎಂದು ಹಿಲಿಯಾನ ಬೆಳ್ಳಿಯಾನ ಅಭಿನಂದನಾ ಸಮಿತಿಯ ಸದಸ್ಯರಾದ ರಾಘವೇಂದ್ರ ರಾಜ್ ಸಾಸ್ತಾನ ಹೇಳಿದರು.