


ಡೈಲಿ ವಾರ್ತೆ: 21/ಮಾರ್ಚ್ /2025


ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಕೋಟ ಹಾಗೂ ಭಗತ್ ಸಿಂಗ್ ಯುವ ವೇದಿಕೆ ವತಿಯಿಂದ ನಡೆಯುವ ಸ್ಪರ್ಶ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೋಟ| ಬಾಳೆಬೆಟ್ಟು ಫ್ರೆಂಡ್ಸ್ (ರಿ.) ಬಾಳೆಬೆಟ್ಟು ಹಾಗೂ ಭಗತ್ ಸಿಂಗ್ ಯುವ ವೇದಿಕೆ (ರಿ.) ಕೋಟ ಪ್ರಸ್ತುತಿಯಲ್ಲಿ ಏಳನೇ ವರ್ಷದ ಸ್ಪರ್ಶ ಕಾರ್ಯಕ್ರಮದ ಪೋಸ್ಟರ್ ಕೋಟ ಅಮೃತೇಶ್ವರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಆನಂದ್ .ಸಿ. ಕುಂದರ್ ಅಧಿಕೃತವಾಗಿ ಬಿಡುಗಡೆಗೊಳಿಸಿದರು.


ಅಂದು ಯಕ್ಷಗಾನದ ನಡುತಿಟ್ಟಿನ ಸುಪ್ರಸಿದ್ಧ ಕಲಾವಿದ ಕೋಟ ಸುರೇಶ ಬಂಗೇರರವರಿಗೆ ಹುಟ್ಟೂರ ಸನ್ಮಾನ ,ಸಮಾಜದಲ್ಲಿನ ಧಾರ್ಮಿಕ,ಸಾಮಾಜಿಕ ,ಶೈಕ್ಷಣಿಕ ಮತ್ತು ವೃತ್ತಿ ಸಾಧಕರಿಗೆ ಸನ್ಮಾನ ಮತ್ತು ಮಾದರಿ ಸಂಘಟನೆಗಳಿಗೆ ಗೌರವ ಅಶಕ್ತರಿಗೆ ಆರ್ಥಿಕ ನೆರವು ,ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ನಡೆಯಲಿದೆ.
ಕೋಟ ಡ್ಯಾನ್ಸ್ ಕ್ರೀವ್ ಇವರಿಂದ ಡ್ಯಾನ್ಸ್ ಧಮಾಕ ಹಾಗೂ ಶಿವದೂತ ಗುಳಿಗ ಖ್ಯಾತಿಯ ಕಲಾಸಂಗಮ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ನಾಟಕ ಕನ್ನಡದಲ್ಲಿ ನಡೆಯಲಿದೆ.
ಪೋಸ್ಟರ್ ಅನಾವರಣದ ವೇಳೆ ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ, ಚಂದ್ರ ಪೂಜಾರಿ ,ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವ ಪೂಜಾರಿ, ಚಂದ್ರ ಆಚಾರ್ ,ಗಣೇಶ್ ನೆಲ್ಲಿಬೆಟ್ಟು, ಕೋಟ ಸಿ.ಎ ಬ್ಯಾಂಕ್ ನಿರ್ದೇಶಕ ರಂಜಿತ್ ಬಾರಿಕೆರೆ ಹಾಗೂ ಸ್ಥಳೀಯರಾದ ಆನಂದ ದೇವಾಡಿಗ ಹಿರೇದೇವಸ್ಥಾನ ಬೆಟ್ಟು ,ಕಿರಣ್ ಪೂಜಾರಿ ತೆಕ್ಕಟ್ಟೆ ,ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ, ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.