ಡೈಲಿ ವಾರ್ತೆ: 23/ಮಾರ್ಚ್ /2025

ಬಾಳೆಕಾಯಿ ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನೆಗಳು

ಬಾಳೆ ಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ. ಅನೇಕ ಪೌಷ್ಟಿಕಾಂಶಗಳು ಹಸಿ ಬಾಳೆಕಾಯಿ ಯಲ್ಲಿ ಕಂಡುಬರುತ್ತವೆ, ಇದು ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಬಾಳೆಕಾಯಿ ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನೆಗಳು

1.ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ: ಸರಳವಾಗಿ ಹೇಳಬೇಕೆಂದರೆ ಹಿರಿಯರ ಮಾತಿನಂತೆ ಊಟ ಮಾಡಿದ ನಂತರ ಒಂದು ಬಾಳೆಹಣ್ಣು ತಿನ್ನುವುದು ಎಲ್ಲರಿಗೂ ರೂಢಿಯಲ್ಲಿ ಬೆಳೆದುಬಂದಿದೆ. ಇದಕ್ಕೆ ಕಾರಣ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲೀ ಎಂದು ಹಳದಿ ಬಾಳೆಹಣ್ಣು ಈ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಆದರೆ ಬಾಳೆಕಾಯಿಗಳು ತಮ್ಮಲ್ಲಿನ ಹೆಚ್ಚಿನ ನಾರಿನ ಅಂಶದಿಂದ ಮಲಬದ್ಧತೆಯ ರೋಗಲಕ್ಷಣಗಳು ಸೇರಿದಂತೆ ಇರಿಟೇಬಲ್ ಬೋವಲ್ ಸಿಂಡ್ರೋಮ್ ( ಐಬಿಎಸ್ ) ಸಮಸ್ಯೆಯನ್ನು ಮತ್ತು ಇನ್ನಿತರ ಕರುಳಿಗೆ ಸಂಬಂಧಪಟ್ಟ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ. ಹಸಿರು ಬಾಳೆಹಣ್ಣಿನಲ್ಲಿರುವ ಪೌಷ್ಟಿಕ ಸತ್ವಗಳು ಮಲವನ್ನು ಒಂದೇ ಕಡೆ ಶೇಖರಣೆ ಮಾಡಿ ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತವೆ. ಇದರಿಂದ ಸರಾಗವಾಗಿ ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆ ನಡೆದು ಮಲಬದ್ಧತೆಯ ಸಮಸ್ಯೆ ಇಲ್ಲವಾಗುತ್ತದೆ. ಕರುಳಿನ ಕ್ಯಾನ್ಸರ್ ವಿಷಯದಲ್ಲಿ ಕೂಡ ಇದು ಅತ್ಯಂತ ಒಳ್ಳೆಯ ಪರಿಣಾಮ ಬೀರುತ್ತದೆ. ಕರುಳಿನಲ್ಲಿ ಅತ್ಯಂತ ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳಿಂದ ಮಾಡಲ್ಪಟ್ಟ ಪ್ರತಿರೋಧಕ ಸ್ಟಾರ್ಚ್ ಅಂಶಗಳನ್ನು ತುಂಡರಿಸಿ ಕರುಳಿನಲ್ಲಿ ವಾಸವಿರುವ ಮನುಷ್ಯನಿಗೆ ಉಪಯೋಗವಾಗುವ ಸೂಕ್ಷ್ಮಣುಗಳಿಗೆ ಪ್ರೀಬಯೋಟಿಕ್ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ. ಕರುಳಿನಲ್ಲಿ ವಾಸವಿರುವ ಬ್ಯಾಕ್ಟೀರಿಯಗಳು ಈ ಫೈಬರ್ ಅಂಶವನ್ನು ಉಪಯೋಗಿಸಿಕೊಂಡು ಮನುಷ್ಯನ ದೇಹಕ್ಕೆ ಉಪಯೋಗವಾಗುವ ಪೌಷ್ಟಿಕಾಂಶ ಗಳನ್ನಾಗಿ ಪರಿವರ್ತನೆ ಮಾಡುತ್ತವೆ.

    2.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು: ಯಾವುದೇ ಹಣ್ಣುಗಳು ಅದರಲ್ಲೂ ವಿಶೇಷವಾಗಿ ಇಲ್ಲಿನ ಬಾಳೆಕಾಯಿಗಳು ತಮ್ಮಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ವನ್ನು ಹೊಂದಿರುತ್ತವೆ ಅಂದರೆ ಸರಿಸುಮಾರು 30. ಆದ್ದರಿಂದ ಅವುಗಳನ್ನು ತಿನ್ನುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸುಲಭವಾಗಿ ಮನುಷ್ಯ ತನ್ನ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿರ್ವಹಣೆ ಮಾಡಬಹುದು.
    ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶ ಎಂದರೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಯಾವುದೇ ಆಹಾರಗಳು ತಮ್ಮಲ್ಲಿನ ಸಕ್ಕರೆ ಅಂಶಗಳನ್ನು ದೇಹದ ರಕ್ತ ಸಂಚಾರದಲ್ಲಿ ನಿಧಾನವಾಗಿ ಬಿಡುಗಡೆಗೊಳಿಸುತ್ತವೆ. ಮನುಷ್ಯನ ದೇಹದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗುವ ಸಕ್ಕರೆ ಮಟ್ಟ ಮಧುಮೇಹದ ಸಮಸ್ಯೆಯನ್ನು ಹೆಚ್ಚು ಮಾಡಿ ದೇಹದಲ್ಲಿ ಇನ್ನಿತರ ಮೆಟಬಾಲಿಕ್ ಪ್ರಕ್ರಿಯೆಗಳ ತೊಂದರೆಗೆ ಕಾರಣವಾಗಿ ಹೃದಯ ರಕ್ತನಾಳದ ಕಾಯಿಲೆಯನ್ನು ತಂದೊಡ್ಡುತ್ತದೆ. ಹಾಗಾಗಿ ಮಧುಮೇಹ ಹೊಂದಿರುವ ರೋಗಿಗಳಿಗೆ ವೈದ್ಯರು ಹಳದಿ ಬಣ್ಣಕ್ಕಿಂತಲೂ ಸಾಧ್ಯವಾದಷ್ಟು ಹಸಿರು ಬಣ್ಣದ ಬಾಳೆ ಹಣ್ಣುಗಳನ್ನು ತಿನ್ನಲು ಸೂಚಿಸುತ್ತಾರೆ. ಹಸಿರು ಬಾಳೆಹಣ್ಣಿನಲ್ಲಿ ಇರುವ ಪೆಕ್ಟಿನ್ ಮತ್ತು ಪ್ರತಿರೋಧಕ ಸ್ಟಾರ್ಚ್ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ಸರಿಯಾಗಿ ನಿಯಂತ್ರಣ ಮಾಡುವುದರಲ್ಲಿ ತಮ್ಮ ಮೇಲುಗೈ ಸಾಧಿಸಿವೆ. ಇದು ಮಧುಮೇಹ ಹೊಂದಿರುವವರಿಗೆ ವಿಶೇಷವಾಗಿ ಇನ್ಸುಲಿನ್ ಮೆಟಬಾಲಿಸಂ ಪ್ರಕ್ರಿಯೆಯನ್ನು ಸುಲಭ ಮಾಡಿಕೊಡುತ್ತದೆ.

    3.ತೂಕ ಕಡಿಮೆ ಮಾಡುತ್ತದೆ:
    ಮೊದಲೇ ಹೇಳಿದಂತೆ ಬಾಳೆಕಾಯಿಗಳು ತಮ್ಮಲ್ಲಿ ಅತಿಹೆಚ್ಚಿನ ಫೈಬರ್ ಮತ್ತು ಪ್ರತಿರೋಧಕ ಸ್ಟಾರ್ಚ್‌ ಅಂಶವನ್ನು ಹೊಂದಿವೆ. ಈ ಕಾರಣದಿಂದ ಬಾಳೆಕಾಯಿ ಸೇವನೆಯ ನಂತರ ಹೊಟ್ಟೆ ಹಸಿವು ದೂರವಾಗುತ್ತದೆ. ಹೆಚ್ಚಿನ ಸಮಯದವರೆಗೂ ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ದೇಹದ ತೂಕ ತಾನಾಗಿಯೇ ತಗ್ಗುತ್ತದೆ.
    ಬಾಳೆಕಾಯಿಗಳಲ್ಲಿ ಕಂಡುಬರುವ ಪೆಕ್ಟಿನ್ ಅಂಶ ಹೊಟ್ಟೆ ತುಂಬುವಂತೆ ಮಾಡಿ ದೀರ್ಘಕಾಲ ಹಸಿ ವಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ನಾರಿನ ಅಂಶ ಊಟ ಮಾಡಿದಷ್ಟು ಹೊಟ್ಟೆಗೆ ತೃಪ್ತಿ ಕೊಡುತ್ತದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ದೇಹ ದಿನದ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿಗಳನ್ನು ಸ್ವೀಕರಿಸುತ್ತಾ ಹೋದರೆ ದೇಹದ ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ.

    4.ಹೃದಯ ರಕ್ತನಾಳದ ಆರೋಗ್ಯವನ್ನು ಬಲಪಡಿಸುತ್ತದೆ: ಅಲ್ಲಿ ಉಂಟಾಗುವ ಮೆಟಬಾಲಿಕ್ ಅಸ್ವಸ್ಥತೆ ಗಳಿಂದ ಹೃದಯ ರಕ್ತನಾಳದ ಕಾಯಿಲೆಗಳು ಮನುಷ್ಯನನ್ನು ಕಿತ್ತು ತಿನ್ನುತ್ತವೆ. ಇದಕ್ಕೆ ಜೊತೆಯಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳು ಅಂದರೆ ಬೊಜ್ಜು ಮಧುಮೇಹ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮನುಷ್ಯನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ.

    ಹಸಿಯಾದ ಬಾಳೆಕಾಯಿಗಳಲ್ಲಿ ಪ್ರತಿರೋಧಕ ಸ್ಟಾರ್ಚ್‌ ಅಂಶ ಬಹಳಷ್ಟಿದೆ ಪ್ರಾಣಿಗಳ ಅಧ್ಯಯನ ನಡೆಸಿದ ಸಂಶೋಧನೆಯೊಂದು ಪ್ರತಿರೋಧಕ ಸ್ಟಾರ್ಚ್ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಗುಣಲಕ್ಷಣ ಪಡೆದಿದೆ ಎಂದು ಹೇಳಿದೆ ಕಡಿಮೆ ಕೊಲೆಸ್ಟ್ರಾಲ್‌ ಮಟ್ಟ ಹೊಂದಿರುವ ವ್ಯಕ್ತಿಗೆ ಹೃದಯಕ್ಕೆ ಮತ್ತು ಹೃದಯ ರಕ್ತನಾಳಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ತೀರಾ ಕಡಿಮೆ ಇರುತ್ತವೆ.

    ಇನ್ನು ಮಧುಮೇಹದ ಸಮಸ್ಯೆ ಎದುರಿಸುತ್ತಿರುವವರಿಗೆ ಮೇಲೆ ಹೇಳಿದಂತೆ ಬಾಳೆಕಾಯಿಗಳು ಅವರ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ತಗ್ಗಿಸುತ್ತವೆ. ಆದ್ದರಿಂದ ವೈದ್ಯರ ಸೂಚನೆ ಪಡೆದು ಅವರು ನಿಗದಿಪಡಿಸಿದಂತೆ ಮಧುಮೇಹಿಗಳು ಹಸಿರು ಬಾಳೆ ಹಣ್ಣು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬಹುದು.

    Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.