


ಡೈಲಿ ವಾರ್ತೆ: 23/ಮಾರ್ಚ್ /2025


ಬೈಕ್ ಮೇಲೆ ಮರ ಬಿದ್ದು 3 ವರ್ಷದ ಮಗು ಸಾವು!

ಬೆಂಗಳೂರು: ನಗರದಲ್ಲಿ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾಲು ಸಾಲು ಅನಾಹುತಗಳು, ಅವಘಡಗಳು ಸಂಭವಿಸುತ್ತಿವೆ.
ಸಂಜೆ ಸುರಿದ ಮಳೆಗೆ ಮರ ಮುರಿದು ಬೈಕ್ ಮೇಲೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಜೀವನಹಳ್ಳಿಯ ಪೂರ್ವ ಪಾರ್ಕ್ ಬಳಿ ವರದಿಯಾಗಿದೆ.
ರಕ್ಷಾ ಮೃತಪಟ್ಟಿರುವ ಮಗುವಾಗಿದ್ದು, ತಂದೆಯ ಜೊತೆ ಮಗು ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಮರ ಬಿದ್ದು ಮಗುವಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಮಗುವನ್ನು ಫೋಷಕರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.