ಡೈಲಿ ವಾರ್ತೆ: 24/ಮಾರ್ಚ್ /2025

ಲಾಂಗ್‌ ಹಿಡಿದು ರೀಲ್ಸ್‌| ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ರಜತ್‌, ವಿನಯ್‌ ಗೌಡ ವಿರುದ್ಧ ಎಫ್‌ಐ‌ರ್ ದಾಖಲು

ಬೆಂಗಳೂರು: ಬಿಗ್ ಬಾಸ್ ಸೀಸನ್ 10, 11ರ ಸ್ವರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಆದರೆ ರೀಲ್ಸ್ ಮಾಡುವಾಗ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದು, ಇಬ್ಬರಿಗೂ ಸಂಕಷ್ಟ ತಂದಿಟ್ಟಿದೆ.
ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರ ಸ್ಪರ್ಧಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆ‌ರ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ.