ಡೈಲಿ ವಾರ್ತೆ: 24/ಮಾರ್ಚ್ /2025

ಚಿತ್ರದುರ್ಗ| ಬೈಕ್ ಗೆ ಸಾರಿಗೆ ಬಸ್ ಢಿಕ್ಕಿ: ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು

ಚಿತ್ರದುರ್ಗ : ಬೈಕ್ ಗೆ ಸಾರಿಗೆ ಬಸ್ ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಗ್ರಾಮಾಂತರ ಠಾಣೆ ಬಳಿ ನಡೆದಿದೆ.

ಮೃತರನ್ನು ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಯಾಸಿನ್(22), ಅಲ್ತಾಫ್(22) ಎಂದು ಗುರುತಿಸಲಾಗಿದೆ.
ಅವರೊಂದಿಗೆ ಇದ್ದ ನಬೀಲ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅವರು ಸವಾರಿ ಮಾಡುತ್ತಿದ್ದ ಬೈಕ್ ಬಸ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ರಾತ್ರಿ ಊಟ ಮುಗಿಸಿ ಹಿಂತಿರುಗುತ್ತಿದ್ದಾಗ ಚಿತ್ರಗುರ್ಗ ಜೆಸಿಆರ್ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. ಅಲ್ತಾಫ್ ಕಡಕ್ಕಲ್‌ನ ಕೊಟ್ಟುಕ್ಕಲ್‌ನವರು. ಮುಹಮ್ಮದ್ ಯಾಸೀನ್ ಚಡಯಮಂಗಲದ ಮಂಜಪ್ಪನವರು. ನಬೀಲ್ ಮದತ್ತರ ಕೊಲ್ಲಯಿಲ್ ಮೂಲದವರು ಎಂದು ತಿಳಿದು ಬಂದಿದೆ.