


ಡೈಲಿ ವಾರ್ತೆ: 25/ಮಾರ್ಚ್ /2025


ತೆಂಗಿನ ಎಣ್ಣೆಯ ಬಳಕೆಯಿಂದ ಆರೋಗ್ಯ ಪ್ರಯೋಜನಗಳು

ಭಾರತೀಯರು ಹಲವು ವರ್ಷಗಳಿಂದ ತೆಂಗಿನ ಎಣ್ಣೆಯನ್ನು ಬಳಸುತ್ತಿದ್ದಾರೆ. ಇದರಿಂದ ಹಲವು ಆರೋಗ್ಯ ಲಾಭಗಳಿವೆ. ಈ ಕಾರಣಕ್ಕೆ ಸಾಂಪ್ರದಾಯಿಕ ಆಯುರ್ವೇದದಲ್ಲಿ ತೆಂಗಿನ ಎಣ್ಣೆಯ ಪಾತ್ರ ಬಹಳ ಮಹತ್ವದ್ದಾಗಿದೆ. ಇದನ್ನು ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಕಲುಶಿತವಲ್ಲದ ತೆಂಗಿನ ಎಣ್ಣೆ ಉತ್ತಮ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ತೆಂಗಿನಕಾಯಿಯನ್ನು ಸೇರಿಸುವುದರಿಂದಾಗುವ ಐದು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

1.ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ:
ಕೊಬ್ಬರಿಯಲ್ಲಿನ ಆಮ್ಲಗಳಾದ (MCFAs) ಲಾರಿಕ್ ಆಮ್ಲ, ಕ್ಯಾಪ್ರಿಲಿಕ್ ಆಮ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲಾರಿಕ್ ಆಮ್ಲ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ. ಮೊನೊಲೌರಿನ್ ವಿರೋಧಿ ವೈರಸ್ ಆಗಿ ಕೂಡ ಇದು ಕಾರ್ಯನಿರ್ವಹಿಸುತ್ತದೆ.
2.ತೂಕವನ್ನು ನಿಯಂತ್ರಿಸುತ್ತದೆ:
ಪ್ರತಿದಿನ ಹಸಿ ತೆಂಗಿನಕಾಯಿ ಅಥವಾ ಕೊಬ್ಬರಿ ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ಬಿಡುಗಡೆಯಾಗುವ ತೈಲವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬು ನಿಯಂತ್ರಣದಲ್ಲಿರುತ್ತದೆ. ಇದರಿಂದಾಗಿ ಸಹಜವಾಗಿಯೇ ತೂಕ ಕೂಡ ಕಡಿಮೆಯಾಗುತ್ತದೆ.
3 ಶಕ್ತಿಯನ್ನು ಹೆಚ್ಚಿಸುತ್ತದೆ
ಕೊಬ್ಬಿನಾಮ್ಲಗಳ ಅತ್ಯುತ್ತಮ ಸಂಯೋಜನೆ ತೆಂಗಿನ ಎಣ್ಣೆ. ಇದು ಚಯಾಪಚಯ ಕ್ರಿಯೆಯ ಮೇಲೆ ಪ್ರಬಲ ಪರಿಣಾಮ ಬೀರುತ್ತವೆ. ತೆಂಗಿನ ಎಣ್ಣೆ ಕೆಟ್ಟ ಬ್ಯಾಕ್ಟೀರಿಯಾವನ್ನು ನಿಯಂತ್ರಿಸಿ, ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳೆಯುವಂತೆ ಮಾಡುತ್ತದೆ.
4 ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ:
ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ಭಾರತೀಯರು ಇದನ್ನು ಬಹಳ ಸಮಯದಿಂದ ಬಳಸುತ್ತಿದ್ದಾರೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಮತ್ತು ಕೊಬ್ಬಿನಾಮ್ಲಗಳಿವೆ. ಇವು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೆತ್ತಿಗೆ ರಕ್ತ ಪೂರೈಕೆಗೆ ಸಹಾಯ ಮಾಡುತ್ತದೆ. ಆ ಮೂಲಕ ಕೂದಲಿನ ನೈಸರ್ಗಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
5 ಚರ್ಮವನ್ನು ತೇವಗೊಳಿಸುತ್ತದೆ:
ತೆಂಗಿನ ಎಣ್ಣೆಯನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಗುಣಮಟ್ಟದ ತೆಂಗಿನ ಎಣ್ಣೆ ಉತ್ತಮ ಪರಿಮಳ ಹೊಂದಿದೆ. ಮಧ್ಯಮ ಸರಣಿ ಕೊಬ್ಬಿನಾಮ್ಲಗಳು ಇದರಲ್ಲಿ ಹೇರಳವಾಗಿವೆ. ಇದನ್ನು ಮುಖ ಮತ್ತು ದೇಹದ ಮಾಯಿಶ್ಚರೈಸರ್ ಆಗಿ ಬಳಸಲಾಗುತ್ತದೆ. ಇದು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಅಂಶವನ್ನು ಹೊಂದಿದೆ. ಚರ್ಮವನ್ನು ಮೃದುಗೊಳಿಸಲು ಸಹ ಇದು ಸಹಾಯ ಮಾಡುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.