


ಡೈಲಿ ವಾರ್ತೆ: 25/ಮಾರ್ಚ್ /2025


ಏಪ್ರಿಲ್ 1ರಿಂದ 3ರವರೆಗೆ ಸಾಸ್ತಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವೈಭವ:
ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮಕ್ಕೆ ದಿನಗಣನೆ

ಕೋಟ: ಎಪ್ರಿಲ1ರಿಂದ 3ರ ತನಕ ಸಾಸ್ತಾನದ ಕಾರ್ತಿಕೇಯ ಎಸ್ಟೇಟ್ ಇಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಇತಿಹಾಸದಲ್ಲೆ ಮೊದಲೆಂಬಂತೆ ಸಾಸ್ತಾನದಲ್ಲಿ ನಡೆಯಲಿದೆ.

ತಿರುಪತಿ ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳುವುದೆ ದೊಡ್ಡ ಭಾಗ್ಯ ಎಂಬಂತೆ ಅದರ ಪೂರ್ವತಯಾರಿಗಳು ವೈಭವಪೂರಿತವಾಗಿ ನಡೆಯುತ್ತಿದೆ.
ಶ್ರೀನಿವಾಸ ಕಲ್ಯಾಣ ಎನ್ನುವ ಬಹುದೊಡ್ಡ ಕಾರ್ಯಕ್ರಮವನ್ನು ರೂಪಿಸುವುದೇ ದೊಡ್ಡ ಸವಾಲಿನ ಕಾರ್ಯವಾದರೂ ಭಗವಂತನ ಇಚ್ಛೆ ಎಂಬಂತೆ ವಿದ್ವಾನ್ ಡಾ.ವಿಜಯ ಮಂಜರ್ ಮಾರ್ಗದರ್ಶನದಲ್ಲಿ ಉದ್ಯಮಿ ಎಂ.ಸಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ ಸಾರಥ್ಯ ತಂಡ ಈ ಕಾರ್ಯಕ್ರಮಕ್ಕಾಗಿ ಹಗಲಿರುಳು ವಿವಿಧ ಸಮಿತಿಗಳ ಮೂಲಕ ಕಾರ್ಯೋನ್ಮುಖವಾಗಿದೆ.
ಸುಮಾರು 30ಸಾವಿರಕ್ಕೂ ಅಧಿಕ ಮಂದಿ ಈ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು ಇದಕ್ಕೆ ಬೇಕಾದ ಸುಸಜ್ಜಿತ ವ್ಯವಸ್ಥೆಗಳು ರೂಪು ರೇಷೆ ಸಿದ್ಧಗೊಂಡಿದೆ.
ಜಗತ್ತಿನ ಅತಿ ಶ್ರೀಮಂತ ಅಧಿದೇವ ಶ್ರೀನಿವಾಸ ಕಲ್ಯಾಣೋತ್ಸವ ಈ ಗ್ರಾಮೀಣ ಭಾಗದಲ್ಲಿ ಮೇಳೈಸುತ್ತಿದ್ದು ಗ್ರಾಮದ ಮನೆ ಮನೆಗಳಲ್ಲಿ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಶ್ರೀನಿವಾಸನ ವಿವಾಹೋತ್ಸವದ ಆಮಂತ್ರಣ ಹಂಚಿಕೆ ಬರದಿಂದ ಸಾಗುತ್ತಿದೆ.
ಕಾರ್ಯಕ್ರಮಗಳ ವಿವರ:
ಏಪ್ರಿಲ್ 1ರಂದು: ಸಾಮೂಹಿಕ ದೇವತಾ ಪ್ರಾರ್ಥನೆ ಸ್ವಸ್ತಿವಾಚನ, ಪುಣ್ಯಾಹವಾಚನ, `ದ್ವಾದಶ ನಾಳಿಕೆರ ಮಹಾ ಗಣಪತಿಯಾಗ’,
ಮಧ್ಯಾಹ್ನ 12 ರಿಂದ ಪೂರ್ಣಾಹುತಿ ಪ್ರಸಾದ ವಿತರಣೆ ನಡೆಯಲಿದೆ.
ಇದೇ ದಿನ ಮಧ್ಯಾಹ್ನ 3 ರಿಂದ ಚಂಡೆ ಮತ್ತು ಮಂಗಳವಾದ್ಯಗಳೊಂದಿಗೆ ಹೊರ ಕಾಣಿಕೆ ಮೆರವಣಿಗೆ ಮತ್ತು ಸಮರ್ಪಣೆ ಜರುಗಲಿದೆ.
ಏಪ್ರಿಲ್ 2ರಂದು: ಬೆಳಿಗ್ಗೆ 9:೦೦ ರಿಂದ ದೇವತಾ ಪ್ರಾರ್ಥನೆ ನವಗ್ರಹ ಹೋಮ ಮಧ್ಯಾಹ್ನ 12 ರಿಂದ ಪೂರ್ಣಾಹುತಿ ಪ್ರಸಾದ ವಿತರಣೆ, ಮಧ್ಯಾಹ್ನ 3 ರಿಂದ ಶ್ರೀ ಪ್ರವೀಣ್ ಪಡುಕೆರೆ ನೇತೃತ್ವದಲ್ಲಿ ವಿಶೇಷ ಕುಣಿತ ಭಜನೆ ಸಂಜೆ 5:30ರಿಂದ ಶ್ರೀ ಪುತ್ತೂರು ಜಗದೀಶ್ ಆಚಾರ್ ಮತ್ತು ತಂಡದವರಿಂದ ಭಕ್ತಿರಸಮಂಜರಿ, ರಾತ್ರಿ 7ರಿಂದ ಶ್ರೀ ವಿದ್ವಾನ್ ಡಾ.ವಿಜಯ ಮಂಜರ್ ಪಾಂಡೇಶ್ವರ ಇವರಿಂದ ಧಾರ್ಮಿಕ ಸಂದೇಶ ನಡೆಯಲಿದೆ.
ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಎಂ.ಸಿ. ಚಂದ್ರಶೇಖರ್ ಪೂಜಾರಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮದರಾಜ್, ಕೋಟ ಶ್ರೀ ಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್. ಹೈದರಾಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ವಿದ್ವಾನ್ ಡಾ.ವಿಜಯಮಂಜರ್ ಪಾಂಡೇಶ್ವರ, ಕಾರ್ತಿಕೇಯ ಎಸ್ಟೇಟ್ ಇದರ ಆಡಳಿತ ಪಾಲುದಾರ ಸುರೇಶ್ ಬೆಟ್ಟಿನ್, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಎಸ್ ಕಾರಂತ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಕನ್ಯ ಹೆಗ್ಡೆ ಭಾಗವಹಿಸಲಿದ್ದಾರೆ.
ಈ ಸಂದರ್ಭ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಐರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಕು ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಖಾರ್ವಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಭರತ್ ಶೆಟಿ, ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಉಪಸ್ಥಿತರಿರುವರು.
ಏಪ್ರಿಲ್ 3ರಂದು: ಬೆಳಿಗ್ಗೆ 9.೦೦ ರಿಂದ ಸ್ಥಳ ಶುದ್ದಿ ,ಪುಣ್ಯಾಹವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ರಿಂದ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 3ರಿಂದ ಸಾಲಿಗ್ರಾಮ ಶ್ರೀ ಗುರುದೇನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ, ಸ್ತಬ್ದ ಚಿತ್ರ, ಚಂಡೆ ಹಾಗೂ ಸಕಲ ಮಂಗಳವಾದ್ಯಗಳೊಂದಿಗೆ ಪದ್ಮಾವತಿ ಸಹಿತ ಶ್ರೀ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ ನಡೆಯಲಿದೆ.
ಸಂಜೆ 5 ರಿಂದ ಶ್ರೀ ದೇವರ ವಿವಾಹ ಮಂಟಪ ಪ್ರವೇಶ, ಸೀಮಾಂತ ಪೂಜೆ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ 6:30ಕ್ಕೆ ಓದಗುವ ಗೋಧೂಳಿ ಲಗ್ನ ಸುಮೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿಯು ಕನ್ಯಾದಾನ “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚಾರಣೆ, ಮಹಾಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಪುಣ್ಯ ಕಾರ್ಯಕ್ರಮಕ್ಕೆ ಹೊರೆ ಕಾಣಿಕೆಯನ್ನು ಸಲ್ಲಿಸುವವರು ಏಪ್ರಿಲ್ 1 ರಂದು ಮಂಗಳವಾರ ಮಧ್ಯಾಹ್ನ 3ರಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಉಗ್ರಾಣಕ್ಕೆ ಸಲ್ಲಿಸಬೇಕಾಗಿ ಕಾರ್ಯಕ್ರಮ ಸಂಘಟಕರು ವಿನಂತಿಸಿದ್ದಾರೆ.
ಲೋಕ ಕಲ್ಯಾಣಕ್ಕಾಗಿ ಹಿಂದೂ ಧರ್ಮದಲ್ಲಿ ಧಾರ್ಮಿಕ ಪ್ರಜ್ಞೆ ಸದಾ ನೆಲೆಯೂರಲು ಇಂಥಹ ಕಾರ್ಯಕ್ರಮಗಳು ಆಗಾಗ ವಿವಿಧ ಭಾಗಗಳಲ್ಲಿ ಆಯೋಜನೆಗೊಳ್ಳುವ ಮೂಲಕ ಧರ್ಮ ಜಾಗೃತಿಯ ನೆಲೆಯಾಗಬೇಕು ಅದರಂತೆ ಸಾಸ್ತಾನದಲ್ಲಿ ಕೋಟ ಹೋಬಳಿ ಭಾಗವನ್ನು ಕೇಂದ್ರಿಕರಿಸಿಕೊಂಡು ಈ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಗಳು ಜರಗಲಿದ್ದು ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಬೇಕೆಂದು ವಿನಂತಿಸಿದ್ದಾರೆ.