


ಡೈಲಿ ವಾರ್ತೆ: 26/ಮಾರ್ಚ್ /2025


ಸುಮಧುರ ಕಂಠದ ಭಾಗವತ ಸಂತೋಷ ಶೆಟ್ಟಿ ಯಡಮೊಗೆ ಇವರಿಗೆ ಗೌರವ ಸನ್ಮಾನ

ಕೋಟ| ಕೊಕ್ಕರ್ಣೆ ಸೂರಾಲು ಕಂಗಿಬೆಟ್ಟಿನಲ್ಲಿ ಮಾ. 25 ರಂದು ನಡೆದ ಶ್ರೀ ಕ್ಷೇತ್ರ ಸೌಕೂರು ಮೇಳದ ಹರಕೆ ಆಟದ ಪುಣ್ಯ ವೇದಿಕೆಯಲ್ಲಿ ಸದಾಶಿವ ಅಮೀನ್ ಹಿತೈಷಿ ಬಳಗ ಕೊಕ್ಕರ್ಣೆ ವತಿಯಿಂದ ಮೇಳದ ಭಾಗವತ ಸುಮಧುರ ಕಂಠದ ಸಂತೋಷ್ ಶೆಟ್ಟಿ ಯಡಮೊಗೆ ಇವರಿಗೆ ಊರಿನ ಗಣ್ಯರ ಸಮ್ಮುಖದಲ್ಲಿ ಗೌರವಾರ್ಪಣೆ ನೀಡಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಹರಕೆದಾರರಾದ ಕ್ರಷ್ಣ ಪೂಜಾರಿ, ಪ್ರವೀಣ್ ಪೂಜಾರಿ ಹಾಗೂ ಕಲಾ ಪೋಷಕರಾದ ಶ್ರೀನಿವಾಸ ನಾಯಕ್, ಸಂಜೀವ ಪೂಜಾರಿ, ಪಟ್ಲ ಪೌಂಡೇಶನ್ ಬ್ರಹ್ಮಾವರ ಘಟಕದ ಗೌರವಾನ್ವಿತ ಸಲಹೆಗಾರ ರಾಮಚಂದ್ರ ಶಾಸ್ತ್ರಿ ಕೊಕ್ಕರ್ಣೆ, ಗೌರವ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಆರೂರು, ಕರ್ಜೆ ಪಂಚಾಯತ್ ಅಧ್ಯಕ್ಷ ದಿನಕರ ಶೆಟ್ಟಿ , ಆರೂರು ಪಂಚಾಯತ್ ಅಧ್ಯಕ್ಷ ಗುರುರಾಜ್ ರಾವ್, ಮಲ್ನಾಡ್ ಕ್ಯಾಶ್ ಹೆಂಗವಳ್ಳಿ ಮಾಲಿಕರಾದ ನವೀನ್ ಚಂದ್ರ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಪೇತ್ರಿ, ಮೇಳದ ಪ್ರಧಾನ ಕಲಾವಿದ ಯಡಮೊಗೆ ಸದಾಶಿವ ಶೆಟ್ಟಿ, ಶ್ರೀಧರ ಭದ್ರಾಪುರ, ಉಪಸ್ಥಿತರಿದ್ದರು.
ಶ್ರೀ ಪಳ್ಳಿ ಕಿಶನ್ ಹೆಗ್ಡೆ ಯವರ ಧಕ್ಷ ಯಜಮಾನಿಕೆಯ ಶ್ರೀ ಸೌಕೂರು ಮೇಳದ ಪುಣ್ಯ ವೇದಿಕೆಯಲ್ಲಿ ಮೇಳದ ಪ್ರಧಾನ ಭಾಗವತರಾದ ಕೊಕ್ಕರ್ಣೆ ಸದಾಶಿವ ಅಮೀನ್ ರವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಅಮರಗಂದರ್ವ ಕಾಳಿಂಗ ನಾವಡರ ಮೇರು ಕೃತಿ ವಿಜಯಶ್ರೀ ಸಾವಿರಾರು ಕಲಾಭಿಮಾನಿ ದೇವರುಗಳ ಮುಂದೆ ಭರ್ಜರಿಯಾಗಿ ಪ್ರದರ್ಶನಗೊಂಡಿತು.