


ಡೈಲಿ ವಾರ್ತೆ: 26/ಮಾರ್ಚ್ /2025


ಕೋಟ| ಚಿನ್ನ ಕದ್ದ ಕಳ್ಳನ ಬಂಧನ

ಕೋಟ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ಕಳ್ಳತನ ಮಾಡುತ್ತಿದ್ದ ಮಣೂರು ಪ್ರವೀಣ ಕುಮಾರ್ ಎಂಬಾತನನ್ನು ಪೊಲೀಸರು ತೆಕ್ಕಟ್ಟೆ ಬಳಿ ಬುಧವಾರ ಬಂಧಿಸಿದ್ದಾರೆ.
ಈತನಿಂದ 25 ಗ್ರಾಂ ತೂಕದ ಸುಮಾರು ರೂ. 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಕೋಟ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಾಘವೇಂದ್ರ ಸಿ ಮತ್ತು ಸುಧಾಪ್ರಭು, ಎ.ಎಸ್.ಐ ಜಯಪ್ರಕಾಶ್, ಹೆಡ್ ಕಾನ್ಸಟೇಬಲ್ ರೇವತಿ, ಅಶೋಕ ಕುಂದಾಪುರ, ಕೃಷ್ಣ, ಶ್ರೀಧರ್, ಕಾನ್ಸಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ಇದ್ದರು.