


ಡೈಲಿ ವಾರ್ತೆ: 30/ಮಾರ್ಚ್ /2025


ಮಣಿಪಾಲ| ಮಹಿಳೆಯ ಸರ ಎಗರಿಸಿ ಪರಾರಿ: ದೂರು ದಾಖಲು

ಮಣಿಪಾಲ: ಕೆಎಂಸಿ ಉದ್ಯೋಗಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ವ್ಯಕ್ತಿ 45 ಗ್ರಾಂ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಕೆಎಂಸಿ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದ ಅಟೆಂಡರ್ ಹೆರ್ಗಾ ನಿವಾಸಿ ವಸಂತಿ (51) ಅವರು ದೈನಂದಿನ ಕೆಲಸ ಮುಗಿಸಿ ಸಂಜೆ 5:30 ಮನೆಗೆ ಹೋಗುತ್ತಿದ್ದಾಗ WGSHA ಕಾಲೇಜಿನ ಹಿಂಬದಿ ಓರ್ವ ವ್ಯಕ್ತಿ ಬಂದು ವಸಂತಿ ಅವರ ಕುತ್ತಿಗೆಗೆ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 3,50,000ರೂ ಮೌಲ್ಯದ ಸುಮಾರು 45 ಗ್ರಾಂ ತೂಕದ ಚಿನ್ನದ ಚೈನ್ ನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 56/2025 ಕಲಂ: 304 BNS ರಂತೆ ಪ್ರಕರಣ ದಾಖಲಾಗಿರುತ್ತದೆ.