ಡೈಲಿ ವಾರ್ತೆ: 30/ಮಾರ್ಚ್ /2025

ಮಣೂರು ಹಬ್ಬ-2025 ಆಮಂತ್ರಣ ಬಿಡುಗಡೆ
ಜಾತ್ರೋತ್ಸವದಲ್ಲಿ ಭಾಗಿಯಾಗಿ – ಸತೀಶ್ ಹೆಚ್ ಕುಂದರ್

ಕೋಟ: ಮಣೂರು ಜಾತ್ರೋತ್ಸವ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ ಇಲ್ಲಿನ ಜಾತ್ರೋತ್ಸವ ಮನೆ ಮನದ ಹಬ್ಬವಾಗಿ ಪರಿವರ್ತನೆಗೊಂಡಿದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಬ ಮಹಾಗಣಪತಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು.
ಶನಿವಾರ ಇದೇ ಬರುವ ಎಪ್ರಿಲ್ 10ರಿಂದ 14ರ ತನಕ ಮಣೂರು ಮಹಾಲಿಂಗೇಶ್ವರ ದೇಗುಲದ ವಾರ್ಷಿಕ ರಥೋತ್ಸವ ಮಣೂರು ಹಬ್ಬ 2025 ಇದರ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿ ಧಾರ್ಮಿಕ ಶಕ್ತಿಪೀಠವಾಗಿ ಮಣೂರು ಮಹಾಲಿಂಗೇಶ್ವರ ದೇಗುಲ ಸರ್ವಭಕ್ತರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ ಅದಲ್ಲದೆ ಇತ್ತೀಚಿಗಿನ ವರ್ಷಗಳಲ್ಲಿ ಜಾತ್ರೆಗೆ ವಿಶೇಷ ಮೆರುಗು ನೀಡಲಾಗುತ್ತಿದೆ ಅದರಂತೆ ಈ ವರ್ಷ ಕೂಡಾ ಎಲ್ಲರೂ ಭಾಗಿಯಾಗಿ ಶ್ರೀ ದೇವರ ಅನುಗ್ರಹ ಪಡೆಯಿರಿ ಎಂದು ಅಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಶೆಟ್ಟಿ,ಅಚ್ಯುತ್ ಹಂದೆ,ರವಿ ಐತಾಳ್,ದಿನೇಶ್ ಆಚಾರ್,ಸುಫಲ ಶೆಟ್ಟಿ, ದಿವ್ಯ ಪ್ರಭು,ಚಂದ್ರ ಹರ್ತಟ್ಟು, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ,ವಿಷ್ಣುಮೂರ್ತಿ ಮಯ್ಯ,ನಾಗರಾಜ್ ಅಮೀನ್,ಎಂ.ಎನ್ ಮಧ್ಯಸ್ಥ, ಮಹೇಶ್ ಹೊಳ್ಳ,ಶಿವರಾಮ ಶೆಟ್ಟಿ, ರಾಜೇಂದ್ರ ಉರಾಳ,ಹೇರಂಬ ದೇಗುಲದ ಅರ್ಚಕರಾದ ರಘುಪತಿ ಭಟ್,ನರಸಿಂಹ ತಿಂಗಳಾಯ, ಹಂದೆ ದೇಗುಲದ ಅಧ್ಯಕ್ಷ ಅಮರ್ ಹಂದೆ ಉಪಸ್ಥಿತರಿದ್ದರು.