


ಡೈಲಿ ವಾರ್ತೆ: 30/ಮಾರ್ಚ್ /2025


ಕರಾವಳಿಯಾದ್ಯಂತ ಮಾ. 31(ನಾಳೆ )ಈದ್ ಉಲ್ ಫಿತರ್ ಆಚರಣೆ

ಉಡುಪಿ: ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆ ಕರ್ನಾಟಕದ ಕರಾವಳಿಯಲ್ಲಿ ನಾಳೆ (ಮಾ.31) ರಂದು ಈದ್ ಉಲ್ ಫಿತರ್ ಆಚರಣೆ ಮಾಡಲಾಗುತ್ತಿದೆ.
ಶವ್ವಾಲ್‌ನ ಪ್ರಥಮ ಚಂದ್ರದರ್ಶನ ರವಿವಾರ ಮುಸ್ಸಂಜೆ ಕೇರಳದ ಕ್ಯಾಲಿಕಟ್ ನಲ್ಲಿ ಆಗಿರುವುದರಿಂದ ಕರಾವಳಿಯಲ್ಲಿ ಸೋಮವಾರ ಈದ್ ಉಲ್ ಫಿತರ್ ಆಚರಿಸಲು ದ.ಕ. ಉಡುಪಿ, ಉಳ್ಳಾಲ ಖಾಝಿಗಳು ಘೋಷಿಸಿದ್ದಾರೆ.
ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಸೋಮವಾರ ಹಬ್ಬ ಆಚರಣೆ ಮಾಡಲು ಸೂಚಿಸಲಾಗಿದೆ.
ನಾಳೆ ಈದ್ಗಾ, ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಹಬ್ಬದ ಪ್ರಾರ್ಥನೆ ಸಲ್ಲಿಸಲಿದ್ದಾರೆ.