


ಡೈಲಿ ವಾರ್ತೆ: 01/ಏಪ್ರಿಲ್ /2025


ವಿಟ್ಲ: ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ – ತಪ್ಪಿದ ಭಾರೀ ದುರಂತ

ವಿಟ್ಲ: ವಿಟ್ಲ ಪೇಟೆಯ ಹೃದಯಭಾಗದಲ್ಲಿರುವ ಅಂಗಡಿಯನ್ನು ಮುಚ್ಚಿ ವ್ಯಾಪಾರಿ ಮನೆಗೆ ತೆರಳಿದ ಬಳಿಕ ಹೊಗೆ ಕಾಣಿಸಿಕೊಂಡಿದ್ದು ಸ್ಥಳೀಯರು ತತ್‌ಕ್ಷಣ ಜಾಗರೂಕರಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನತ್ತರಕೆರೆ ನಿವಾಸಿ ಮಹೇಶ್ ಭಟ್ ಅವರಿಗೆ ಸೇರಿದ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.
ರಾತ್ರಿ ವೇಳೆ ಮಾಲಕ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಆ ಬಳಿಕ ಅಂಗಡಿ ಒಳಗಡೆಯಿಂದ ಹೊಗೆ ಕಾಣಿಸಿಕೊಂಡಿದ್ದು, ತತ್ ಕ್ಷಣ ಬಾಗಿಲು ತೆರೆದಾಗ ಬೆಂಕಿ ಹಬ್ಬಿದೆ. ಪಕ್ಕದ ಅಂಗಡಿ ಮಾಲಕ ಇಸ್ಮಾಯಿಲ್ ಒಕ್ಕೆತ್ತೂರು ಅವರು ತನ್ನ ಅಂಗಡಿಯಲ್ಲಿದ್ದ ಫೈರ್‌ಗ್ಯಾಸ್ ಮೂಲಕ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ಹಾನಿಯಾಗಿವೆ.