


ಡೈಲಿ ವಾರ್ತೆ: 02/ಏಪ್ರಿಲ್ /2025


ನಿಧಿ ಆಸೆಗಾಗಿ ಗ್ರಾಮದ ಕೋಣಕಲ್ಲ ಭರಮ ದೇವರ ಕಲ್ಲು ಅಗೆದ ಕಳ್ಳರ!

ಹಾವೇರಿ: ನಿಧಿ ಆಸೆಗಾಗಿ ಕಳ್ಳರು ಕೋಣಕಲ್ಲ ಭರಮ ದೇವರ ಕಲ್ಲು ಅಗೆದಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ನಡೆದಿದೆ. ನಿಧಿಗಳ್ಳರ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಜಾಗದಲ್ಲಿ ನಿಧಿ ಆಸೆಗಾಗಿ ಗ್ರಾಮದ ಜನ ಆರಾಧಿಸುತ್ತಿದ್ದ ಕೋಣಕಲ್ಲ ಭರಮ ದೇವರ ಕಲ್ಲನ್ನು ಅಗೆದು ಹಾಕಿದ್ದಾರೆ. ಆರಾಧ್ಯ ದೇವರ ಕಲ್ಲು ಅಗೆದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 2-3 ದಿನಗಳಿಂದ ಪುರಾತನ ಕಾಲದ ದೇವಾಲಯ ಬಳಿ ನಿಧಿಗಳ್ಳರು ಓಡಾಡುತ್ತಿದ್ದಾರೆ.
ನಿಧಿ ಆಸೆಗಾಗಿ ಕಲ್ಲು ಅಗೆದ ದುಷ್ಕರ್ಮಿಗಳು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.