ಡೈಲಿ ವಾರ್ತೆ: 02/ಏಪ್ರಿಲ್ /2025

ಕೋಟ| ಬೈಕ್ ಡಿಕ್ಕಿ, ಪಾದಚಾರಿ ಗಂಭೀರ ಗಾಯ

ಕೋಟ:ರಸ್ತೆ ದಾಟಲು ನಿಂತಿದ್ದ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಏ. 2 ರಂದು ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಡೆದಿದೆ.

ಗಂಭೀರ ಗಾಯಗೊಂಡ ವ್ಯಕ್ತಿ ವಸಂತ ಅಣ್ಣಪ್ಪ ಎಂದು ಗುರುತಿಸಲಾಗಿದೆ.
ಅಣ್ಣಪ್ಪ ಅವರು ರಸ್ತೆ ದಾಟಲು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಸಂದರ್ಭ ಗಣೇಶ್‌ ಎಂಬುವವನು
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು ರಸ್ತೆ ದಾಟಲು ನಿಂತಿದ್ದ ವಸಂತ ಅಣ್ಣಪ್ಪ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ವಸಂತ ರವರು ರಸ್ತೆಗೆ ಬಿದ್ದಿದ್ದು ಅವರಿಗೆ ತಲೆಗೆ, ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಅಲ್ಲದೇ ಮೋಟಾರ್‌ ಸೈಕಲ್‌ ಸವಾರನಿಗೂ ರಕ್ತಗಾಯ ಉಂಟಾಗಿರುತ್ತದೆ.
ತಕ್ಷಣ ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.