


ಡೈಲಿ ವಾರ್ತೆ: 03/ಏಪ್ರಿಲ್ /2025


ಮಣಿಪಾಲ | ಟೈಮಿಂಗ್ ವಿಚಾರಕ್ಕೆಬಸ್ ಕಂಡಕ್ಟರ್ ಗಳ ನಡುವೆ ಮಾರಾಮಾರಿ: ಚಾಲಕ ಮತ್ತು ನಿರ್ವಾಹಕನ ಬಂಧನ! (ಹೊಡೆದಾಟದ ವಿಡಿಯೋ ವೈರಲ್)

ಉಡುಪಿ: ಟೈಮಿಂಗ್ ವಿಚಾರಕ್ಕೆ ಬಸ್ ಕಂಡಕ್ಟರ್ ಗಳ ನಡುವೆ ಮಾರಮಾರಿಯಾದ ಘಟನೆ ಮಣಿಪಾಲ ಟೈಗರ್ ಸರ್ಕಲ್ ಖಾಸಗಿ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ.
ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಟೈಮಿಂಗ್ ವಿಚಾರದಲ್ಲಿ ಆನಂದ್ ಬಸ್ ನ ಕಂಡಕ್ಟರ್ ವಿಜಯ ಕುಮಾರ್ ಹಾಗೂ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್ ಆಲ್ಪಾಜ್ ನಡುವೆ ಗಲಾಟೆ ನಡೆದಿದ್ದು, ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.
ಮೇಲ್ಕಂಡ ಪ್ರಕರಣಗಳಲ್ಲಿ ತನಿಖೆ ಕೈಗೊಂಡು ಪ್ರಕರಣದ ಆರೋಪಿಗಳಾದ 1.ಮೊಹಮ್ಮದ್ ಆಲ್ಪಾಜ್(25), ಉಚ್ಚಿಲ ಮಂಜುನಾಥ ಬಸ್ಸಿನ ಚಾಲಕ ಹಾಗೂ 2. ವಿಜಯಕುಮಾರ್(25) ಚಿತ್ರದುರ್ಗ, ಆನಂದ ಬಸ್ಸಿನ ಕಂಡಕ್ಟರ್ ರವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಹಾಗೂ ಸದ್ರಿ ಬಸ್‌ಗಳನ್ನು ಅಮಾನತ್ತು ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.