

ಡೈಲಿ ವಾರ್ತೆ: 04/ಏಪ್ರಿಲ್ /2025


ಉತ್ತಮ ಜೀರ್ಣಕ್ರಿಯೆಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾದ ಎಂಟು ಆಹಾರಗಳು

ಉತ್ತಮ ಜೀರ್ಣಕ್ರಿಯೆ ಮತ್ತು ಶಕ್ತಿಗೆ ದಿನವನ್ನು ಸರಿಯಾಗಿ ಆರಂಭಿಸುವುದು ಬಲು ಮುಖ್ಯ. ಇದಕ್ಕಾಗಿ ಕೆಲ ಆಹಾರಗಳೂ ಸಹಾಯ ಮಾಡುತ್ತವೆ. ಅಂತೆಯೇ ಉತ್ತಮ ಜೀರ್ಣಕ್ರಿಯೆಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದಾದ ಎಂಟು ಆಹಾರಗಳ ಬಗೆಗಿನ ಮಾಹಿತಿ ಇಲ್ಲಿದೆ

ನೆನೆಸಿಟ್ಟ ಬಾದಾಮಿ:
ಆರೋಗ್ಯಕ್ಕೆ ಬಲು ಉತ್ತಮ. ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು, ಫೈಬರ್, ಪ್ರೋಟೀನ್ ಸಮೃದ್ಧವಾಗಿದೆ. ನೆನೆಸಿಟ್ಟ ಬಾದಾಮಿ ಮೆದುಳಿನ ಉತ್ತಮ ಕಾರ್ಯನಿರ್ವಹಣೆ, ಉತ್ತಮ ಜೀರ್ಣಕ್ರಿಯೆ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ

ಪಪ್ಪಾಯಿ:
ಪಪ್ಪಾಯಿ ಕೂಡಾ ಆರೋಗ್ಯಕ್ಕೆ ಉತ್ತಮವಾದ ಹಣ್ಣಾಗಿದೆ. ಇದರಲ್ಲಿ ಜೀರ್ಣಕಾರಿ ಕಿಣ್ವಗಳು ಸಮೃದ್ಧ ಪ್ರಮಾಣದಲ್ಲಿರುತ್ತದೆ. ಪಪ್ಪಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೊಟ್ಟೆಯನ್ನು ಸ್ವಚ್ಛಗೊಳಿಸಲು, ಕರುಳಿನ ಉತ್ತಮ ಚಲನೆಗೆ ಸಹಾಯ ಮಾಡುತ್ತದೆ. ಈ ಮೂಲಕ ಉತ್ತಮ ಜೀರ್ಣಕ್ರಿಯೆಗೂ ಇದು ಕೊಡುಗೆ ನೀಡುತ್ತದೆ

ಜೇನುತುಪ್ಪ ಮತ್ತು ಬೆಚ್ಚಗಿನ ನೀರು:
ಒಂದು ಲೋಟ ಬೆಚ್ಚಗಿನ ನೀರು ಮತ್ತು ಸ್ವಲ್ಪ ಜೇನುತುಪ್ಪ ದಿನವಿಡೀ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನೊಂದಿಗೆ ಜೇನುತುಪ್ಪವನ್ನು ಸೇರಿಸಿದಾಗ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ ಮತ್ತು ಚಯಾಪಚಯ ಕ್ರಿಯೆಗೆ ವೇಗ ನೀಡುತ್ತದೆ.

ಬಾಳೆಹಣ್ಣು:
ಆರೋಗ್ಯಕರ ಹಣ್ಣಾಗಿರುವ ಬಾಳೆಹಣ್ಣು ಕೂಡಾ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಉತ್ತಮ ಆಹಾರದ ಆಯ್ಕೆಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ನೈಸರ್ಗಿಕ ಸಕ್ಕರೆ ಇದ್ದು, ಇದು ತ್ವರಿತ ಶಕ್ತಿಯನ್ನು ಒದಗಿಸಲು, ಕರುಳಿನ ಆರೋಗ್ಯವನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.

ಎಳನೀರು:
ಎಳನೀರನ್ನೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಇದು ನೈಸರ್ಗಿಕ ಎಲೆಕ್ಟ್ರೋಲೈಟ್ ಪಾನೀಯವಾಗಿದೆ. ಇದು ದೇಹದ ಜಲಸಂಚಯನ ಉತ್ತಮವಾಗಿಸುತ್ತದೆ ಮತ್ತು ಪರಿಣಾಮಕಾರಿ ಜೀರ್ಣಕ್ರಿಯೆಗೆ ನೆರವಾಗುತ್ತದೆ

ನೆನೆಸಿಟ್ಟ ಒಣದ್ರಾಕ್ಷಿ:
ನೆನೆಸಿಟ್ಟ ಒಣದ್ರಾಕ್ಷಿ ಕೂಡಾ ಆರೋಗ್ಯಕ್ಕೆ ಬಲು ಉತ್ತಮ. ಇದನ್ನೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಒಣದ್ರಾಕ್ಷಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಉತ್ತಮವಾಗಿಸುತ್ತದೆ, ಆಸಿಡಿಟಿ ಸಮತೋಲನಗೊಳಿಸುತ್ತದೆ, ಕರುಳಿನ ಉತ್ತಮ ಚಲನೆಗೆ ಸಹಾಯ ಮಾಡುತ್ತದೆ

ನೆನೆಸಿಟ್ಟ ಚಿಯಾ ಬೀಜಗಳು:
ನೆನೆಸಿಟ್ಟ ಚಿಯಾ ಬೀಜಗಳು ಪೋಷಕಾಂಶಗಳ ಶಕ್ತಿಕೇಂದ್ರಗಳಾಗಿವೆ. ಇದರಲ್ಲಿ ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾದ ಪ್ರಮಾಣದಲ್ಲಿರುತ್ತದೆ. ಇದು ದೀರ್ಘಕಾಲದ ತನಕ ಶಕ್ತಿಯನ್ನು ಒದಗಿಸುತ್ತದೆ ಮತ್ತು ಉತ್ತಮ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ

ಬೆಚ್ಚಗಿನ ನಿಂಬೆ ನೀರು:
ಒಂದು ಗ್ಲಾಸ್ ಬೆಚ್ಚಗಿನ ಲಿಂಬೆ ನೀರು ದೇಹದ ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿಸಲು ಮತ್ತು ಜೀರ್ಣಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.