

ಡೈಲಿ ವಾರ್ತೆ: 03/ಏಪ್ರಿಲ್ /2025


ಮಣಿಪಾಲ| ಮಾಂಗಲ್ಯ ಸರ ಕಳ್ಳನ ಬಂಧನ

ಮಣಿಪಾಲ: ಕೆಎಂಸಿ ಉದ್ಯೋಗಿಯೋರ್ವರು ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮಹಿಳೆಯ 45 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮಣಿಪಾಲ ಪೊಲೀಸರು
ಯಶಸ್ವಿಯಾಗಿದ್ದಾರೆ.
ಸರಳಬೆಟ್ಟಿನ ನಿವಾಸಿ ಸಂತೋಷ್ (29) ಬಂಧಿತ ಆರೋಪಿ. ಮಾ.29 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿ, ಹೆರ್ಗಾ ನಿವಾಸಿ ವಸಂತಿ ಅವರನ್ನು ಆರೋಪಿ ಸಂತೋಷ್ ಹಿಂಬಾಲಿಸಿ ಅವರ ಕುತ್ತಿಗೆಯಲ್ಲಿದ್ದ 45 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದ.
ಶ್ವಾನದಳ ನೀಡಿದ ಸುಳಿವನ್ನು ಆದರಿಸಿ ಮಣಿಪಾಲ ಪೊಲೀಸರು ಸರಳಬೆಟ್ಟು ಸಂತೋಷ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ 3.5 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.