ಡೈಲಿ ವಾರ್ತೆ: 04/ಏಪ್ರಿಲ್ /2025

ಬೆಳ್ತಂಗಡಿ| ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮ ಗೋ ಸಾಗಾಟ – ಹಿಂದು ಸಂಘಟನೆಯಿಂದ ತಡೆ

ಬೆಳ್ತಂಗಡಿ: ಮಂಗಳೂರಿಗೆ ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು ಗೋ ಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.

ಹಿಂಸಾತ್ಮಕವಾಗಿ ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10 ರಿಂದ 15 ಹಸುಗಳನ್ನು ಗೋವಧೆಗೆಂದು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದು ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ್ದಾರೆ.

ಘಟನೆಯಲ್ಲಿ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದು, ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದಂತೆ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ ವಾಹನ ಹಾಗೂ 15 ಕ್ಕೂ ಅಧಿಕ ಗೋವುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.