

ಡೈಲಿ ವಾರ್ತೆ: 06/ಏಪ್ರಿಲ್ /2025


ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಷೇರು ಮಾರುಕಟ್ಟೆ ಕುರಿತು ಕಾರ್ಯಗಾರ

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಷೇರು ಮಾರುಕಟ್ಟೆ ಕುರಿತು ಕಾರ್ಯಗಾರ ನಡೆಯಿತು. ಷೇರು ಮಾರುಕಟ್ಟೆಯಲ್ಲಿ ತಜ್ಞರಾದ ಪೀಟರ್ ಆಂಟನಿ ಪಿಂಟೋ ಮತ್ತು ಶಕೀಲ್ ಜೈನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವಾಗ ಸೂಕ್ತವಾದ ಮಾಹಿತಿ ಮತ್ತು ಜ್ಞಾನವು ಅಗತ್ಯವಾಗಿದೆ. ಭವಿಷ್ಯದಲ್ಲಿ ಉಂಟಾಗುವ ಅನಿಶ್ಚಿತತೆಗಳನ್ನು ಎದುರಿಸಲು ಹೂಡಿಕೆಯು ಮಹತ್ವದಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ಸ್ಟಾಫ್ ಕೋ-ಆರ್ಡಿನೇಟರ್ ಗುರುರಾಜ್ ಪಿ. ಮತ್ತು ವೈಶಾಲಿ ಕೆ. ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಲಹರಿ ಪಿ. ಮತ್ತು ರಮ್ಯ ರಾಮಚಂದ್ರ ನಾಯಕ್ ಹಾಗೂ ಎಂ.ಕಾಂ ಮತ್ತು ಎಚ್. ಆರ್. ಡಿ. ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿಗಳಾದ ಕೃತಿ ಎಚ್. ಪಿ. ಸ್ವಾಗತಿಸಿದರೆ, ಭವಿತ್ ಯು.ಕೆ. ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನನ್ಯ ಜೆ. ಕೊಟ್ಟಾರಿ ನಿರ್ವಹಿಸಿದರು.