

ಡೈಲಿ ವಾರ್ತೆ: 06/04/2025


ಮಣೂರು ದೇಗುಲದ ಜಾತ್ರೋತ್ಸವ ಹಿನ್ನಲ್ಲೆ ಸ್ವಚ್ಛತಾ ಕಾರ್ಯಕ್ರಮ

ಕೋಟ: ಇಲ್ಲಿನ ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಮಹಾಲಿಂಗೇಶ್ವರ ಹೇರಂಬ ಮಹಾಗಣಪತಿ ದೇಗುಲದ ವಾರ್ಷಿಕ ಜಾತ್ರೋತ್ಸವ ಇದೇ ಬರುವ 12ರಂದು ಜರಗಲಿದ್ದು ಈ ಹಿನ್ನಲ್ಲೆಯಲ್ಲಿ ದೇಗುಲದ ಒಳ ಹಾಗೂ ಹೊರ ಪ್ರಾಂಗಣ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಜರಗಿತು.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಅಪುö್ಪ ಎಟಾಕಸ್೯ ಮಣೂರು ಇವರ ಸಹಯೋಗದೊಂದಿಗೆ 249ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಸಂಯೋಜಿಸಿಕೊಂಡಿತು.

ದೇಗುಲದ ಅಧ್ಯಕ್ಷ ಸತೀಶ್ ಕುಂದರ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ದೇಗುಲದ ಆಡಳಿತ ಟ್ರಸ್ಟಿ ಕೃಷ್ಣ ದೇವಾಡಿಗ , ಚಂದ್ರ ಹರ್ತಟ್ಟು, ದಿನೇಶ್ ಆಚಾರ್, ಸ್ಥಳೀಯರಾದ ಭಾರತೀ ವಿಷ್ಣುಮೂರ್ತಿ ಮಯ್ಯ, ರಾಜೇಂದ್ರ ಉರಾಳ, ಶಿವರಾಮ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.