ಡೈಲಿ ವಾರ್ತೆ: 06/ಏಪ್ರಿಲ್ /2025

ಕೋಟ ಗಾಂಜಾ ಸೇವನೆ‌ ಇಬ್ಬರು‌ ವಶಕ್ಕೆ

ಕೋಟ:ಕೋಟ ಪೊಲೀಸ್ ಠಾಣಾ ವ್ಯಾಪ್ರಿಯ ಬೇಳೂರು ದೇಲಟ್ಟು ಎಂಬಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ಸಿ ಅವರು ಸಿಬ್ಬಂದಿ ಯವರೊಂದಿಗೆ ರೌಂಡ್ಸ್ ನಲ್ಲಿದ್ದ ಸಂದರ್ಭ ಗಿಳಿಯಾರಿನ ರಾಘವೇಂದ್ರ (27) ಮತ್ತು ಕುಂದಾಪುರ ತಾಲ್ಲೂಕಿನ‌ ಬೇಳೂರು ಗ್ರಾಮದ ಶಿವರಾಜ್ (32) ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಕಾರಣ ಕೋಟ ಠಾಣೆಗೆ ಹಾಜರಾಗುವಂತೆ ನೋಟೀಸು ನೀಡಿ ಕಳುಹಿಸಿರುತ್ತಾರೆ. ಠಾಣೆಗೆ ಬಂದಿದ್ದ ಇಬ್ಬರನ್ನೂ ಕೋಟ‌ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಪರೀಕ್ಷಿಸಿ ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿದ್ದಾರೆ.
ತನಿಖೆ‌ ನಡೆಯುತ್ತಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.