ಡೈಲಿ ವಾರ್ತೆ: 08/ಏಪ್ರಿಲ್/2025

ಜಿಲ್ಲಾಡಳಿತದ ತೀರ್ಮಾನ ನೋಡಿಕೊಂಡು ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಯಿಂದ ಮುಂದಿನ ಹೋರಾಟ – ಗೋವಿಂದರಾಜ್ ಹೆಗ್ಡೆ

ಬ್ರಹ್ಮಾವರ:ರಾಷ್ಟ್ರೀಯ ಹೆದ್ದಾರಿ -66ರ ಉಳಿಸಿ ಹೋರಾಟ ಸಮಿತಿ ಸಂಚಾಲಕ ಗೋವಿಂದರಾಜ್ ಹೆಗ್ಡೆಯವರ ನೇತೃತ್ವದಲ್ಲಿ ಹೆದ್ದಾರಿ ಸಮಸ್ಯೆಗಳ ಕುರಿತು ಈ ಹಿಂದೆ ಸಾಕಷ್ಟು ಹೋರಾಟ ನಡೆಸಿದೆ.

ಬ್ರಹ್ಮಾವರದ ಹೆದ್ದಾರಿ ಸಮಸ್ಯೆಯ ಕುರಿತು ಎ.8 ರಂದು ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರವನ್ನು ಗಮನಿಸಿ ಮುಂದಿನ ಹೋರಾಟ ಆರಂಭಿಸಲಾಗುವುದು ಎಂದು ಸಮಿತಿ ಸಂಚಾಲಕ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ಹೆದ್ದಾರಿ ಸಮಸ್ಯೆಗಳ ಕುರಿತು ಸಮಿತಿ ಹಲವಾರು ಸಮಯಗಳಿಂದ ಹೋರಾಟಗಳನ್ನು ಎಲ್ಲರ ಸಹಕಾರದಿಂದ ಮಾಡುತ್ತಾ ಬಂದಿದೆ. ಮೊನ್ನೆ ನಡೆದ ದುರ್ಘಟನೆಯ ನಂತರ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಬ್ರಹ್ಮಾವರ ತಹಶೀಲ್ದಾರರ ನೇತೃತ್ವದಲ್ಲಿ ಪೊಲೀಸು, ಹೆದ್ದಾರಿ ಇಲಾಖೆಯ ಅಧಿಕಾರಿಗಳ ಜೊತೆ ಸರಣಿ ಸಭೆಗಳು ನಡೆಯುತ್ತಿದ್ದು ಎ.8ರಂದು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸಭೆ ನಡೆಯುವುದಾಗಿ ತಿಳಿದು ಬಂದಿರುತ್ತದೆ. ಸಭೆಯ ನಂತರ ಜಿಲ್ಲಾಡಳಿತದ ತೀರ್ಮಾನದ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಹಾಗೂ 2011ರಲ್ಲಿ ಎಂಬ್ಯಾಕ್‌ಮೆಂಟ್ ಬದಲಾವಣೆ ಆಗಲು ಕಾರಣ ಏನು? ಮತ್ತು 2012ರಿಂದ ಸಮಿತಿ ಫ್ಲೈ ಓವರ್ ಕುರಿತು ನಡೆಸಿರುವ ಪ್ರಯತ್ನಗಳ ಬಗ್ಗೆ ದಿನಾಂಕ 09.04.2025 ರಂದು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿಗಳನ್ನು ದಾಖಲೆ ಸಹಿತ ಬ್ರಹ್ಮಾವರದ ನಾಗರಿಕರ ಗಮನಕ್ಕೆ ತರಲಿದ್ದೇನೆ. ಸಮಿತಿಯ ಮುಂದಿನ ಹೋರಾಟದ ಕುರಿತು ಮಾಹಿತಿ ನೀಡಲಿದ್ದೇನೆ ಎಂದು ಸಮಿತಿಯ ಸಂಚಾಲಕ ಗೋವಿಂದರಾಜ್‌ಹೆಗ್ಡೆಯವರು ತಿಳಿಸಿದ್ದಾರೆ.